alex Certify
ಕನ್ನಡ ದುನಿಯಾ       Mobile App
       

Kannada Duniya

ಸೊಸೆ ಖಾಸಗಿ ಫೋಟೋ ತೋರಿಸಿ ಸಹೋದರಿಗೆ ಬ್ಲಾಕ್ ಮೇಲ್..!

ಮಹಾರಾಷ್ಟ್ರದ ಅಂಬರ್ನಾಥದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಸೊಸೆ ಹಾಗೂ ಮಗ ಏಕಾಂತದಲ್ಲಿದ್ದಾಗ ಫೋಟೋ ತೆಗೆದ ಮಾವನೊಬ್ಬ ಸೊಸೆ ಸಹೋದರಿಗೆ ಬ್ಲಾಕ್ ಮೇಲ್ ಮಾಡಿದ್ದಾನೆ. ಕಳೆದ 8 ತಿಂಗಳಿಂದ ಬ್ಲಾಕ್ ಮೇಲ್ ಮಾಡಿ ಶಾರೀರಿಕ ಸಂಬಂಧ ಬೆಳೆಸಿದ್ದ ಆರೋಪಿಯನ್ನು ಬಂಧಿಸಲಾಗಿದೆ.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ 26 ವರ್ಷದ ಯುವತಿಯೊಬ್ಬಳು ಸಹೋದರಿ ಮಾವನ ವಿರುದ್ಧ ದೂರು ನೀಡಿದ್ದಾಳೆ. ಸಹೋದರಿಯ ಖಾಸಗಿ ಅಂಗದ ಫೋಟೋ ತೆಗೆದು ಮಾವ ಬ್ಲಾಕ್ ಮೇಲ್ ಮಾಡಿದ್ದಾನಂತೆ. ಅಕ್ಕನ ಫೋಟೋವನ್ನು ಸಾಮಾಜಿಕ ಜಾಲತಾಣ ಹಾಗೂ ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡುವುದಾಗಿ ಹೆದರಿಸಿ ದೈಹಿಕ ಸಂಬಂಧ ಬೆಳೆಸಿದ್ದಾನಂತೆ.

ತಂಗಿ ಮದುವೆಗೆ ತೊಂದರೆಯಾಗಬಹುದೆಂದು ಅಕ್ಕ ಕೂಡ ಸುಮ್ಮನಿದ್ದಳು ಎನ್ನಲಾಗಿದೆ. ಆದ್ರೆ 8 ತಿಂಗಳ ನಂತ್ರ ಪೊಲೀಸ್ ಠಾಣೆ ಏರಿದೆ ಪ್ರಕರಣ. ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ಶುರು ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...