alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್ ! ಶಾಲೆಯಲ್ಲೇ ಪ್ರಿನ್ಸಿಪಾಲ್ ಪೋಲಿ ಆಟ

rape 458mm

ಕಾಮಕ್ಕೆ ಕಣ್ಣಿಲ್ಲ ಅಂತಾರೆ, ಇದಕ್ಕೆ ನಿದರ್ಶನ ಎನ್ನಬಹುದಾದ ಘಟನೆಯೊಂದು ಮುಂಬೈನಲ್ಲಿ ನಡೆದಿದೆ. ಶಾಲೆಯಲ್ಲಿ ಮಕ್ಕಳ ಹಿತಕಾಯಬೇಕಾದ ಪ್ರಿನ್ಸಿಪಾಲ್ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಎಸಗಿದ ಅಮಾನವೀಯ ಘಟನೆ ಇದಾಗಿದ್ದು, ಆರೋಪಿತನನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ ಗೋರೆಗಾಂವ್ ಪ್ರದೇಶದ ಆರ್ಶಾ ಇಂಟರ್ ನ್ಯಾಷನಲ್ ಶಾಲೆಯಲ್ಲಿ 8 ವರ್ಷದ ಬಾಲಕಿ ಮೇಲೆ 72 ವರ್ಷ ವಯಸ್ಸಿನ ಪ್ರಾಂಶುಪಾಲ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಶಾಲೆಗೆ ಹೋಗಲು ಹಿಂದೇಟು ಹಾಕಿದ್ದಳು. ಶಾಲೆಗೆ ಮೊದಲು ಖುಷಿಯಿಂದ ಹೋಗುತ್ತಿದ್ದ ಬಾಲಕಿ, ಈಗ ಹೋಗಲು ಹಠ ಮಾಡಿದ್ದೇಕೆ ಎಂದು ಆತಂಕಗೊಂಡ ತಾಯಿ ಪ್ರಶ್ನಿಸಿದಾಗ ಬಾಲಕಿ ಪ್ರಿನ್ಸಿಪಾಲ್ ಪೋಲಿ ಆಟದ ಬಗ್ಗೆ ಬಾಯಿಬಿಟ್ಟಿದ್ದಾಳೆ. ಬಾಲಕಿಯ ತಾಯಿ ಗೋರೆಗಾಂವ್ ಸೆಕ್ಟರ್-5 ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿರುವ ಈ ವೃದ್ಧ ಆರ್ಶಾ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪ್ರಾಂಶುಪಾಲನಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಭಾಗದಲ್ಲಿ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾನೆ. ಇದೀಗ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...