alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಹಣದ ಆಮಿಷವೊಡ್ಡಿ ಅತ್ಯಾಚಾರವೆಸಗಿದ ವೃದ್ಧ

ದೆಹಲಿಯಲ್ಲಿ 60 ವರ್ಷದ ವೃದ್ಧ ಇಬ್ಬರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಮಾಡಿದ್ದಾನೆ. ಈ ವಿಷಯವನ್ನು ಎಲ್ಲೂ ಬಹಿರಂಗಪಡಿಸದಂತೆ ಇಬ್ಬರಿಗೂ ತಲಾ 5 ರೂಪಾಯಿ ಕೊಟ್ಟಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಮೊಹಮದ್ದ ಜೈನುಲ್ ಅಂತಾ ಗುರುತಿಸಲಾಗಿದೆ.

ಈತ ಒಬ್ಬ ಕಾರ್ಮಿಕ. 5 ಮತ್ತು 9 ವರ್ಷದ ಇಬ್ಬರು ಬಾಲಕಿಯರ ಮೇಲೆ ಕಾಮದ ಕಣ್ಣು ಹಾಕಿದ್ದ. ಸಿಹಿ ತಿಂಡಿ ಕೊಡುವುದಾಗಿ ಹೇಳಿ ಅವರನ್ನು ತನ್ನ ಮನೆಗೆ ಕರೆದೊಯ್ದಿದ್ದಾನೆ. ನಂತರ ಇಬ್ಬರ ಮೇಲೂ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಈ ವಿಷಯವನ್ನೂ ಯಾರ ಬಳಿಯೂ ಹೇಳದಂತೆ ಬೆದರಿಸಿ 5 ರೂಪಾಯಿ ಕೊಟ್ಟು ಕಳಿಸಿದ್ದಾನೆ.

ಹೆದರಿದ್ದ ಬಾಲಕಿಯರು ಸಂಜೆವರೆಗೂ ಸುಮ್ಮನಿದ್ದರು. ಆದ್ರೆ ನೋವು ತಡೆಯಲಾಗದೇ ಕಾಮಾಂಧ ವೃದ್ಧ ಮಾಡಿದ ನೀಚ ಕೆಲಸವನ್ನು ಹೆತ್ತವರಿಗೆ ತಿಳಿಸಿದ್ದಾರೆ. ಬಾಲಕಿಯರ ಖಾಸಗಿ ಅಂಗದ ಮೇಲಿನ ಗಾಯದ ಗುರುತನ್ನು ಗಮನಿಸಿದ ಪೋಷಕರು ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...