alex Certify
ಕನ್ನಡ ದುನಿಯಾ       Mobile App
       

Kannada Duniya

ತೆಲಂಗಾಣದಲ್ಲೊಂದು ಪೈಶಾಚಿಕ ಕೃತ್ಯ

ತೆಲಂಗಾಣದ ವಾನಪರ್ಥಿ ಜಿಲ್ಲೆಯಲ್ಲಿ 6 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ದುಷ್ಟರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಪೆದ್ದುಗುಡೆಮ್ ಎಂಬ ಗ್ರಾಮದಲ್ಲಿ ಈ ಪೈಶಾಚಿಕ ಕೃತ್ಯ ನಡೆದಿದೆ. ಆರೋಪಿಗಳಾದ ರಾಮಕೃಷ್ಣ, ನರಸಿಂಹ ಮತ್ತು ಮಧು ಕೊಲ್ಲಾಪುರ್ ಮಂಡಲ್ ನಿವಾಸಿಗಳು.

ಬಾಲಕಿಯ ತಂದೆ ಗಾರೆ ಕೆಲಸ ಮಾಡುತ್ತಿದ್ದು, ಆತನಿಗೆ ಇವರೆಲ್ಲ ಪರಿಚಿತರು ಅಂತಾ ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 10ರಂದು ಬಾಲಕಿ, ತಂದೆ ಕೆಲಸ ಮಾಡುತ್ತಿದ್ದ ಕನ್ ಸ್ಟ್ರಕ್ಷನ್ ಸೈಟ್ ಬಳಿ ಬಂದಿದ್ಲು. ಆಕೆಗೆ ಚಾಕಲೇಟ್ ಆಸೆ ತೋರಿಸಿ ಕರೆದೊಯ್ದ ಕಾಮುಕರು, ಅವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.

ಅವಳು ವಿಷಯವನ್ನು ಹೆತ್ತವರ ಬಳಿ ಬಾಯ್ಬಿಡಬಹುದು ಅನ್ನೋ ಭಯದಿಂದ ಬಾಲಕಿಯನ್ನು ಕೊಂದು ಮನೆಯ ಕಪಾಟಿನಲ್ಲಿ ಬಚ್ಚಿಟ್ಟಿದ್ದರು. ಮೇಲಿಂದ ಮರಳು ಮುಚ್ಚಿಬಿಟ್ಟಿದ್ದರು. ಬಾಲಕಿಯನ್ನು ಕಾಣದೇ ಕಂಗೆಟ್ಟ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಬಚ್ಚಿಟ್ಟಿದ್ದ ಶವ ವಾಸನೆ ಬರಲಾರಂಭಿಸಿದ್ದರಿಂದ, ಆಕೆಯನ್ನು ಕೊಲೆ ಮಾಡಿರೋ ವಿಚಾರ ಬೆಳಕಿಗೆ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...