alex Certify
ಕನ್ನಡ ದುನಿಯಾ       Mobile App
       

Kannada Duniya

ಮಲತಂದೆಯ ನೀಚ ಕೃತ್ಯಕ್ಕೆ ನಲುಗಿದ 6 ವರ್ಷದ ಬಾಲೆ

rape121

ದೆಹಲಿಯ ಸಾಕೇತ್ ನಲ್ಲಿ ಮಲ ತಂದೆಯಿಂದ ಅತ್ಯಾಚಾರಕ್ಕೊಳಗಾದ 6 ವರ್ಷದ ಬಾಲಕಿ ಸಾವು- ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ. ತೀವ್ರವಾದ ಆಂತರಿಕ ಗಾಯವಾಗಿದ್ದು, ಬಾಲಕಿಯನ್ನು ಏಮ್ಸ್ ಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಕಾಮುಕ ಮಲತಂದೆಯನ್ನು ಬಂಧಿಸಿದ್ದಾರೆ.

ಬಾಲಕಿಯ ಖಾಸಗಿ ಅಂಗಗಳಲ್ಲಿ ಕೀವು ತುಂಬಿದ್ದು ಶಸ್ತ್ರಚಿಕಿತ್ಸೆ ಮಾಡಲೇಬೇಕು ಅಂತಾ ಏಮ್ಸ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಸದ್ಯ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದೆ ಅಂತಾ ಹೇಳಿದ್ದಾರೆ. ರಕ್ತಸಿಕ್ತವಾಗಿ ಬಿದ್ದಿದ್ದ ಬಾಲಕಿಯನ್ನು ಗಮನಿಸಿದ್ದ ಪಕ್ಕದ ಮನೆಯ ಮಹಿಳೆ, ಸಹಾಯವಾಣಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು.

ವರ್ಷದ ಹಿಂದೆಷ್ಟೆ ಬಾಲಕಿಯ ತಾಯಿ ಎರಡನೇ ಮದುವೆಯಾಗಿದ್ಲು. ತಾನು ಕೆಲಸ ಮಾಡ್ತಾ ಇದ್ದ ಸ್ಥಳಕ್ಕೆ ಬಾಲಕಿಯನ್ನು ಕರೆದೊಯ್ದ ಮಲತಂದೆ ಅವಳ ಮೇಲೆ ದೌರ್ಜನ್ಯ ಎಸಗಿದ್ದಾನೆ. ವಿಷಯ ಬಾಯ್ಬಿಟ್ರೆ ಕೊಲ್ಲೋದಾಗಿ ಬೆದರಿಸಿದ್ದಾನೆ. ಈ ಘಟನೆ ನಡೆಯುವುದಕ್ಕೂ ಎರಡು ದಿನ ಮೊದಲು ಕೂಡ ಆತ ಬಾಲೆ ಮೇಲೆ ಅತ್ಯಾಚಾರ ಮಾಡಿದ್ದ. ಆರೋಪಿಗೆ ಗಲ್ಲು ಶಿಕ್ಷೆಯಾಗಬೇಕು ಅಂತಾ ಮಹಿಳಾ ಆಯೋಗ ಆಗ್ರಹಿಸಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...