alex Certify
ಕನ್ನಡ ದುನಿಯಾ       Mobile App
       

Kannada Duniya

ಚಿಕಿತ್ಸೆ ಹೆಸರಲ್ಲಿ ಲೈಂಗಿಕ ಶೋಷಣೆ ಮಾಡಿದ ಮನೋಚಿಕಿತ್ಸಕಿ ಅರೆಸ್ಟ್

ಅಮೆರಿಕಾದ ಮಾನಸಿಕ ಆರೋಗ್ಯ ಕೇಂದ್ರವೊಂದರಲ್ಲಿ ಕೆಲಸ ಮಾಡ್ತಿದ್ದ ಮಹಿಳೆಯನ್ನು ಬಂಧಿಸಲಾಗಿದೆ. ಪುರುಷ ರೋಗಿಗಳಿಗೆ ಮಹಿಳೆ ಲೈಂಗಿಕ ಕಿರುಕುಳ ನೀಡುತ್ತಿದ್ದಳು ಎನ್ನುವ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿದೆ.

ಕ್ರಿಸ್ಟಿ ಲೆನ್ಹಾರ್ಡತ್ ಹೆಸರಿನ ಮಹಿಳೆ ಮನೋಚಿಕಿತ್ಸಕಿಯಾಗಿ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದಳು. 2014ರಲ್ಲಿ ಮಾನಸಿಕವಾಗಿ ಅಸ್ವಸ್ಥಗೊಂಡಿದ್ದ ಯುವಕನನ್ನು ಆರೋಗ್ಯ ಕೇಂದ್ರಕ್ಕೆ ಸೇರಿಸಲಾಗಿತ್ತು. ಒಂದು ವರ್ಷದಲ್ಲಿ ಯುವಕ ಆರೋಗ್ಯ ಕೇಂದ್ರದಿಂದ ಹೊರಗೆ ಬರುವಂತಾಗಿದ್ದ. ಆದ್ರೆ ಕ್ರಿಸ್ಟಿ ಯುವಕ ಹಾರ್ಟ್ ನನ್ನು 2017ರವರೆಗೆ ಆರೋಗ್ಯ ಕೇಂದ್ರದಲ್ಲಿಯೇ ಇಟ್ಟುಕೊಂಡಿದ್ದಳು.

ಹಾರ್ಟ್ ಗೆ ಮೂರು ವರ್ಷಗಳ ಕಾಲ ಲೈಂಗಿಕ ಕಿರುಕುಳ ನೀಡಿದ ಕ್ರಿಸ್ಟಿ ಇದ್ರಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿದ್ದಳಂತೆ. ಹಾರ್ಟ್ ಮಹಿಳೆಯಿಂದ ನರಕ ಯಾತನೆ ಅನುಭವಿಸಿದ್ದನಂತೆ. 2017ರಲ್ಲಿ ಆರೋಗ್ಯ ಕೇಂದ್ರದಿಂದ ಬಿಡುಗಡೆಯಾದ ಹಾರ್ಟ್ ಈ ಬಗ್ಗೆ ದೂರು ನೀಡಿದ್ದ. ದೂರಿನ ಮೇಲೆ ಮಹಿಳೆಯನ್ನು ಕೆಲಸದಿಂದ ವಜಾ ಮಾಡಲಾಗಿತ್ತು.

ಏಪ್ರಿಲ್ 5, 2018ರಂದು ವಿಕಲಾಂಗನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳೆಯನ್ನು ಬಂಧಿಸಿದಾಗ ಎಲ್ಲ ಸತ್ಯ ಹೊರಬಿದ್ದಿದೆ. ಕೋರ್ಟ್ ಮಹಿಳೆಗೆ ಒಂದು ಲಕ್ಷ ಡಾಲರ್ ದಂಡ ವಿಧಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...