alex Certify
ಕನ್ನಡ ದುನಿಯಾ       Mobile App
       

Kannada Duniya

ಆಘಾತಕಾರಿ ಕೃತ್ಯವೆಸಗಿದ್ದಾನೆ ಅಪ್ರಾಪ್ತ

ಚೆನ್ನೈ: ತಮಿಳುನಾಡಿನ ಪುದುಕೋಟೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ತಾಪ್ತನೊಬ್ಬ ಆಘಾತಕಾರಿ ಕೃತ್ಯವೆಸಗಿದ್ದಾನೆ. 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಬೆಂಕಿ ಹಚ್ಚಿದ್ದಾನೆ.

ಕೀಲಥಟ್ಟಿಪಾರೈ ಗ್ರಾಮದಲ್ಲಿ ದಿನಗೂಲಿ ದಂಪತಿಯ ಪುತ್ರಿಯಾಗಿರುವ 5 ವರ್ಷದ ಬಾಲಕಿ ಅಂಗನವಾಡಿಯಿಂದ ಬಂದ ಬಳಿಕ ಮನೆಯಲ್ಲಿರುತ್ತಿದ್ದಳು. ಬಳಿಕ ಆಕೆಯ ಹಿರಿಯ ಸಹೋದರ ಮನೆಗೆ ಬರುತ್ತಿದ್ದ. ನಂತರದಲ್ಲಿ ಪೋಷಕರು ಕೂಲಿ ಕೆಲಸ ಮುಗಿಸಿಕೊಂಡು ಬರುತ್ತಿದ್ದರು.

ಬುಧವಾರ ಅಂಗನವಾಡಿಯಿಂದ ಮನೆಗೆ ಬಂದ ಬಾಲಕಿ ಪಕ್ಕದ ಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ, ಅವರ ಪಕ್ಕದ ಮನೆಯ ನಿವಾಸಿಯಾಗಿರುವ 14 ವರ್ಷದ ಬಾಲಕ ಬಾಲಕಿಯ ಮನೆಯೊಳಗೆ ಕರೆದುಕೊಂಡು ಹೋಗಿದ್ದಾನೆ.

ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಆತನೊಂದಿಗೆ ಇದ್ದ ಮತ್ತೊಬ್ಬ ಬಾಲಕ ಭಯದಿಂದ ಹೊರಗೆ ಓಡಿದ್ದು, ಬಾಲಕಿಯ ಸಹೋದರನಿಗೆ ವಿಷಯ ತಿಳಿಸಿದ್ದಾನೆ. ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಬಾಲಕ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿ ಮನೆಗೆ ಬೆಂಕಿ ಹಚ್ಚಿದ್ದಾನೆ.

ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಬಾಲಕಿ ಮೃತಪಟ್ಟಿದ್ದಾಗಿ ಬಿಂಬಿಸಿದ್ದಾನೆ. ಈತನೊಂದಿಗೆ ಇದ್ದ ಬಾಲಕನ ಹೇಳಿಕೆ ಆಧರಿಸಿ ತನಿಖೆ ಕೈಗೊಂಡ ಪೊಲೀಸರು ನಿಜ ಸಂಗತಿಯನ್ನು ಬಯಲಿಗೆಳೆದಿದ್ದಾರೆ. ಅಪ್ರಾಪ್ತನನ್ನು ರಿಮ್ಯಾಂಡ್ ಹೋಂಗೆ ಕಳಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...