alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಗೆ ಬ್ಲಾಕ್ ಮೇಲ್ ಮಾಡಿ 5 ಪಾದ್ರಿಗಳಿಂದ ಅತ್ಯಾಚಾರ

ಕೇರಳದ ಚರ್ಚ್ ಒಂದರ ಐವರು ಪಾದ್ರಿಗಳ ಮೇಲೆ ಅತ್ಯಾಚಾರದ ಆರೋಪ ಹೇಳಿ ಬಂದಿದೆ. ಘಟನೆ ಬೆಳಕಿಗೆ ಬರ್ತಿದ್ದಂತೆ ಆರೋಪಿಗಳನ್ನು ಪಾದ್ರಿ ಸ್ಥಾನದಿಂದ ಕಿತ್ತುಹಾಕಲಾಗಿದೆ. ಕೊಟ್ಟಾಯಮ್ ಜಿಲ್ಲೆಯ ತಿರುವಲ್ಲೂವಿನ ನಿವಾಸಿ ಮಹಿಳೆ ಪತಿ, ಆಡಿಯೋ  ಕ್ಲಿಪ್  ಬಿಡುಗಡೆ ಮಾಡಿದ್ದಾನೆ.

ಆಡಿಯೋ ಕ್ಲಿಪ್ ನಲ್ಲಿ ಪತ್ನಿಗಾದ ಶೋಷಣೆಯನ್ನು ವಿವರಿಸಿದ್ದಾನೆ. ಚರ್ಚ್ ನ ಒಬ್ಬ ಪಾದ್ರಿ ಮದುವೆಗೂ ಮುನ್ನವೇ ಅತ್ಯಾಚಾರವೆಸಗಿದ್ದನಂತೆ. ಮದುವೆ ನಂತ್ರವೂ ಆತನ ಲೈಂಗಿಕ ಕಿರುಕುಳ ಮುಂದುವರೆದಿತ್ತಂತೆ. ಈ ಬಗ್ಗೆ ಮಹಿಳೆ ಇನ್ನೊಬ್ಬ ಪಾದ್ರಿಗೆ ವಿಷ್ಯ ಹೇಳಿದ್ದಳಂತೆ. ಆ ಪಾದ್ರಿ ಕೂಡ ಬ್ಲಾಕ್ಮೇಲ್ ಮಾಡಿ ಸಂಬಂಧ ಬೆಳೆಸಿದ್ದನಂತೆ.

ಪಾದ್ರಿ ಉಳಿದ ಪಾದ್ರಿಗಳಿಗೂ ಮಹಿಳೆ ವಿಷ್ಯ ತಿಳಿಸಿದ್ದನಂತೆ. ಒಟ್ಟು 5 ಪಾದ್ರಿಗಳು ಮಹಿಳೆಗೆ ಬ್ಲಾಕ್ಮೇಲ್ ಮಾಡಿ ಲೈಂಗಿಕ ಶೋಷಣೆ ಮಾಡಿದ್ದಾರಂತೆ. ಘಟನೆ ನಂತ್ರ ಪಾದ್ರಿಗಳು ಹುದ್ದೆ ಕಳೆದುಕೊಂಡಿದ್ದಾರೆ. ಆದ್ರೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ದೂರಿನ ನಂತ್ರ ಸೂಕ್ತ ಕ್ರಮಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...