alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ಪಾ ಕೆಲಸಕ್ಕೆ ಹೋಗ್ತಿದ್ದಂತೆ ಮನೆಗೆ ಬರುವ ಅಂಕಲ್ 10 ರೂಪಾಯಿ ನೀಡಿ…..

635860473727652756-706727384_4lchf1

ಅನೇಕ ದಿನಗಳಿಂದ ಸುಮ್ಮನಿರುತ್ತಿದ್ದ  ಬಾಲಕಿಯೊಬ್ಬಳು ತಂದೆಗೆ ಹೇಳಿದ ಕಥೆ ಕೇಳಿ ತಂದೆ ಆಘಾತಕ್ಕೊಳಗಾಗಿದ್ದ. ನಿಂತ ನೆಲವೇ ಕುಸಿದ ಅನುಭವ ತಂದೆಗಾಗಿತ್ತು.

ಘಟನೆ ನಡೆದಿರುವುದು ಹರಿಯಾಣದ ಹಿಸಾರ್ ನ ಹಳ್ಳಿಯೊಂದರಲ್ಲಿ. ಅಲ್ಲಿನ ನಿವಾಸಿಯೊಬ್ಬ ತನ್ನ 14 ವರ್ಷದ ಮಗಳು ಕೆಲ ದಿನಗಳಿಂದ ಸುಮ್ಮನಿರುವುದನ್ನು ಗಮನಿಸಿದ್ದ. ಏಳನೆ ತರಗತಿಯಲ್ಲಿ ಓದುತ್ತಿದ್ದ ಮಗಳು ಭಯಗೊಂಡಿದ್ದಳು. ಬಾಲಕಿ ಜನಿಸಿ 2 ತಿಂಗಳಲ್ಲಿಯೇ ತಾಯಿ ಸಾವನ್ನಪ್ಪಿದ್ದಳು. ಬಾಲಕಿಗೆ ಇಬ್ಬರು ಅಕ್ಕಂದಿರಿದ್ದು ಅವರಿಗೆ ಮದುವೆಯಾಗಿದೆ. ಮನೆಯಲ್ಲಿ ತಂದೆ ಹಾಗೂ ಬಾಲಕಿ ಇಬ್ಬರೇ ವಾಸವಾಗಿದ್ದಾರೆ.

ತಂದೆ ಪ್ರೀತಿಯಿಂದ ಕೇಳಿದಾಗ ಮಗಳು ತನ್ನ ಕಷ್ಟ ಹೇಳಿಕೊಂಡಿದ್ದಳು. ತಂದೆ ಕೆಲಸಕ್ಕೆ ಹೋಗ್ತಿದ್ದಂತೆ 45 ವರ್ಷದ ಪಕ್ಕದ ಮನೆಯ ಅಂಕಲ್ ಮನೆಗೆ ಬರ್ತಾನೆ. 10 ರೂಪಾಯಿ ನೋಟ್ ಹುಡುಗಿಗೆ ನೀಡಿ ರೇಪ್ ಮಾಡ್ತಾನೆಂದು ಬಾಲಕಿ ಹೇಳಿದ್ದಳು. ಅನೇಕ ಬಾರಿ ಅಂಕಲ್ ಈ ರೀತಿ ಮಾಡಿದ್ದಾನೆಂದು ಬಾಲಕಿ ಹೇಳಿಕೆ ನೀಡಿದ್ದಳು. ಬೇರೆಯವರಿಗೆ ಈ ವಿಷ್ಯ ಹೇಳಿದ್ರೆ ಸಾಯಿಸುವುದಾಗಿ ಹೆದರಿಸಿದ್ದನಂತೆ ಅಂಕಲ್.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ನವೆಂಬರ್ 19,2015ರಂದು ಈ ಘಟನೆ ನಡೆದಿದ್ದು, ವಿಚಾರಣೆ ನಡೆಸಿದ ಕೋರ್ಟ್ ಪಾಪಿಯನ್ನು ದೋಷಿಯೆಂದು ತೀರ್ಪಿತ್ತಿದೆ. ಶಿಕ್ಷೆ ಪ್ರಮಾಣವನ್ನು ಶುಕ್ರವಾರದವರೆಗೆ ಕಾಯ್ದಿರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...