alex Certify
ಕನ್ನಡ ದುನಿಯಾ       Mobile App
       

Kannada Duniya

ಗಂಡು ಮಗುವಿಗಾಗಿ ಶಿಕ್ಷಕ ಮಾಡಿದ್ದು ಮಾನಗೇಡಿ ಕೆಲಸ

ವಿವಾಹಿತ ಜಿಲ್ಲಾ ಪರಿಷತ್ ಶಾಲಾ ಶಿಕ್ಷಕನೊಬ್ಬನನ್ನು ಸಾಂಘ್ವಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಮಾರ್ಚ್ ನಲ್ಲಿ ಈತ 19 ವರ್ಷದ ಯುವತಿಯನ್ನು ಅಪಹರಿಸಿ ಬಲವಂತವಾಗಿ ಮದುವೆಯಾಗಿದ್ದ. ಈ ಶಿಕ್ಷಕನಿಗೆ ಈಗ 45 ವರ್ಷ. ಮೊದಲ ಪತ್ನಿಯಿಂದ 12 ವರ್ಷದ ಮಗಳಿದ್ದಾಳೆ.

ಗಂಡು ಮಗು ಹೊಂದಬೇಕು ಅನ್ನೋದು ಅವನ ಆಸೆಯಾಗಿತ್ತು. ಹಾಗಾಗಿ ಯುವತಿಯ ಹೆತ್ತವರಿಗೆ ಹಣ ಸಹಾಯ ಮಾಡುವುದಾಗಿ ಹೇಳಿ ಅವಳನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿಕೊಂಡಿದ್ದಾನೆ. ಶಿಕ್ಷಕನ ಮೊದಲ ಪತ್ನಿ ಹಾಗೂ ನೊಂದ ಯುವತಿಯ ಪೋಷಕರನ್ನು ಸಹ ಪೊಲೀಸರು ಬಂಧಿಸಿದ್ದಾರೆ.

ತನ್ನ ಮೇಲೆ ಯಾವ ರೀತಿ ದೌರ್ಜನ್ಯ ನಡೆದಿದೆ ಅನ್ನೋದನ್ನು ಯುವತಿ ಮೊಬೈಲ್ ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಅದನ್ನು ಪೊಲೀಸರಿಗೆ ಕಳುಹಿಸಿದ್ದಳು. ಏಪ್ರಿಲ್ 10ರಂದು ಆಕೆ ಶಿಕ್ಷಕನಿಂದ ತಪ್ಪಿಸಿಕೊಂಡು ಹೆತ್ತವರ ಬಳಿ ಹೋಗಿದ್ದಳು. ಆದ್ರೆ ಅವರು ಬೆಂಬಲಿಸದೇ ಇದ್ದಾಗ ಮತ್ತೆ ಮರಳಿ ಶಿಕ್ಷಕನ ಮನೆಗೆ ತೆರಳಿದ್ದಳು.

ಗಂಡು ಮಗು ಹೊಂದುವಂತೆ ಶಿಕ್ಷಕನಿಗೆ ಕುಟುಂಬಸ್ಥರು ಒತ್ತಾಯಿಸುತ್ತಿದ್ರು. ಇದಕ್ಕಾಗಿ ಮತ್ತೊಂದು ಮದುವೆ ಮಾಡಲು ಸಜ್ಜಾಗಿದ್ರು. ಅದೇ ಸಂದರ್ಭದಲ್ಲಿ ಈ ಬಡ ಕುಟುಂಬ ಶಿಕ್ಷಕನ ಕಣ್ಣಿಗೆ ಬಿದ್ದಿದೆ. 5 ಲಕ್ಷ ಸಾಲ ತೀರಿಸುವುದಾಗಿಯೂ, ಮನೆ ಕಟ್ಟಿಸಿಕೊಡೋದಾಗಿಯೂ ಆಮಿಷವೊಡ್ಡಿ ಶಿಕ್ಷಕ ಯುವತಿಯನ್ನು ಮದುವೆಯಾಗಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...