alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿಯ ಕಿವಿ ಕತ್ತರಿಸಿ ಪರಾರಿಯಾದ್ಲು ಪತ್ನಿ…!

ಗಂಡನನ್ನ ಗನ್ ಪಾಯಿಂಟ್ ನಲ್ಲಿಟ್ಟು ಬೆದರಿಸಿ ಆತನ ಕಿವಿಯನ್ನು ಪತ್ನಿಯೇ ಕತ್ತರಿಸಿದ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. 40 ವರ್ಷದ ಪತ್ನಿ ಮತ್ತಾಕೆಯ ಸೋದರಿಯರು 20 ವರ್ಷದ ಯುವಕನ ಕಿವಿಯನ್ನ ಕತ್ತರಿಯಿಂದ ಕಟ್ ಮಾಡಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಯುವಕ ತನ್ವೀರ್ ಆಸ್ಪತ್ರೆಯಲ್ಲಿ ಚಿಕಿತತ್ಸೆ ಪಡೆಯುತ್ತಿದ್ದು, ಪತ್ನಿ ಮುಮ್ತಾಜ್ ತಲೆಮರೆಸಿಕೊಂಡಿದ್ದಾಳೆ.

ತನ್ನ ವಯಸ್ಸಿಗಿಂತಲೂ ಅರ್ಧದಷ್ಟು ಹೆಚ್ಚು ವಯಸ್ಸಿನ ಮುಮ್ತಾಜ್ ಳನ್ನ ತನ್ವೀರ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದ. ಮದುವೆಯಾದ ನಂತರದಲ್ಲಿ ತನ್ವೀರ್ ಗೆ ಪತ್ನಿಯ ನಿಜರೂಪ ಗೊತ್ತಾಯ್ತು. ಆಕೆಯ ಸಂಬಂಧವನ್ನು ಕಡಿದುಕೊಳ್ಳೋಕೆ ತನ್ವೀರ್ ಮನೆಯವರು ತುಂಬಾನೇ ಪ್ರಯತ್ನ ಪಟ್ಟರು. ಆದ್ರೆ ಮುಮ್ತಾಜ್ ತನ್ವೀರ್ ನನ್ನ ಆತನ ಮನೆಯವರ ಸಂಗಡ ಸೇರೋದಕ್ಕೆ ಬಿಡ್ತಿರಲಿಲ್ಲ. ತನ್ವೀರ್ ತನ್ನ ಮನೆಗೆ ಹೋಗದಂತೆ ಮುಮ್ತಾಜ್ ಆತನನ್ನ ಟಾರ್ಚರ್ ಮಾಡುತ್ತಿದ್ದಳು.

ಈ ಸಂದರ್ಭದಲ್ಲಿ ಸಮಯ ನೋಡಿ ಮನೆಯಿಂದ ಪರಾರಿಯಾಗಲು ಯತ್ನಿಸಿದ ತನ್ವೀರ್ ನನ್ನ ಹಿಡಿದ ಮುಮ್ತಾಜ್ ಮತ್ತಾಕೆಯ ಸೋದರಿಯರು ಮನಬಂದಂತೆ ಥಳಿಸಿ ಆತನ ಕಿವಿಯನ್ನ ಕತ್ತರಿಸಿದ್ದಾರೆ. ತನ್ವೀರ್ ಮನೆ ಮಾರಿ ಬಂದ ಹಣವನ್ನು ತೆಗೆದುಕೊಂಡು ಆತನನ್ನ ಹಿಂಸಿಸಿದ್ದಾಳೆ ಮುಮ್ತಾಜ್. ಸದ್ಯ ಮುಮ್ತಾಜ್ ಮತ್ತಾಕೆಯ ಸೋದರಿಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...