alex Certify
ಕನ್ನಡ ದುನಿಯಾ       Mobile App
       

Kannada Duniya

ಕಳೆದಿದ್ದ ಮೊಬೈಲ್ ಪಡೆಯಲು ಬಾಲಕಿ ಬಲಿ ಕೊಟ್ರು

lost-mobile_02_11_2016

ಅಸ್ಸಾಂನಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಕುರುಡು ನಂಬಿಕೆಗೆ ಬಾಲಕಿಯೊಬ್ಬಳು ಬಲಿಯಾಗಿದ್ದಾಳೆ. ಮೊಬೈಲ್ ಕಳೆದುಕೊಂಡ ಭೂಪರು, ಮೊಬೈಲ್ ಸಿಗಲೆಂದು ಬಾಲಕಿಯನ್ನು ಬಲಿ ಕೊಟ್ಟಿದ್ದಾರೆ.

ಪೂರ್ವ ಅಸ್ಸಾಂನ ರತನ್ ಪುರದಲ್ಲಿ ಘಟನೆ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಹನುಮಾನ್ ಎಂಬಾತನ ಮಗಳು ಮೊಬೈಲ್ ಕಳೆದುಕೊಂಡಿದ್ದಳು. ಮೊಬೈಲ್ ಮತ್ತೆ ಸಿಗಲೆಂದು ಹನುಮಾನ್ ಸೇರಿದಂತೆ ನಾಲ್ಕು ಮಂದಿ ಮನೆಯಲ್ಲಿಯೇ ಪೂಜೆ ಮಾಡಿದ್ದಾರೆ. ಈ ವೇಳೆ ನಾಲ್ಕು ವರ್ಷದ ಸೋನು ಎಂಬ ಬಾಲಕಿಯನ್ನು ಬಲಿ ನೀಡಿದ್ದಾರೆ.

ನಾಲ್ಕೈದು ದಿನಗಳಿಂದ ಮಗು ಕಾಣೆಯಾಗಿತ್ತು. ನಂತ್ರ ಮಗುವಿನ ತಲೆ ಹಾಗೂ ಕೈ ಸಿಕ್ಕಿದೆ. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...