alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ಐಫೋನ್ ಮಾರಾಟಗಾರರ ಅರೆಸ್ಟ್

4-held-for-selling-fake-iphonesಐಫೋನ್ ಖರೀದಿಸಬೇಕೆಂಬ ಬಯಕೆ ಆನೇಕರಿಗಿರುತ್ತದೆ. ಆದರೆ ದುಬಾರಿ ಬೆಲೆಯ ಕಾರಣ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಕಡಿಮೆ ಬೆಲೆಗೆ ಐಫೋನ್ ಸಿಗುತ್ತದೆಂದರೆ ಯಾರು ಬಿಡುತ್ತಾರೆ ಹೇಳಿ. ಹೀಗೆ ಐಫೋನ್ ಕೊಳ್ಳುವ ಆಸೆ ಹೊಂದಿರುವವರನ್ನೇ ಗುರಿಯಾಗಿಸಿಕೊಂಡು ನಕಲಿ ಐಫೋನ್ ಮಾರಾಟ ಮಾಡುತ್ತಿದ್ದ ನಾಲ್ವರು ಖದೀಮರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಮುನೀರ್ ಖಾನ್, ಅನಾಶ್ ಖಾನ್, ಮಹಮ್ಮದ್ ಹಂಜಾ ಖಾನ್ ಹಾಗೂ ಮಹಮ್ಮದ್ ಇಬ್ರಾಹಿಂ ಬಂಧಿತ ಆರೋಪಿಗಳಾಗಿದ್ದು, ಇವರುಗಳು ಚೀನಾದಿಂದ ಹಳೆಯ ಐಫೋನ್ ಗಳನ್ನು ತರಿಸಿ ಅದಕ್ಕೆ ಬೇರೆ ಬೇರೆ ಬಿಡಿ ಭಾಗಗಳನ್ನು ಹಾಕಿದ ಬಳಿಕ ಹೊಚ್ಚ ಹೊಸ ಐಫೋನ್ ನಂತೆ ಮಾರ್ಪಡಿಸುತ್ತಿದ್ದರು.

ಬಳಿಕ ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದು, ಗ್ರಾಹಕರೂ ಮುಗಿಬಿದ್ದು ಕೊಂಡುಕೊಂಡಿದ್ದಾರೆ. ಈ ಆರೋಪಿಗಳಿಗೆ ಕೆಲ ಮೊಬೈಲ್ ಸರ್ವೀಸ್ ಸೆಂಟರ್ ನವರೂ ಸಹಕರಿಸಿದ್ದಾರೆನ್ನಲಾಗಿದ್ದು, ಬಂಧಿತರಿಂದ 409 ಐಫೋನ್ ಹಾಗೂ ಬಿಡಿಭಾಗಗಳನ್ನು ವಶಪಡಿಸಿಕೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...