alex Certify
ಕನ್ನಡ ದುನಿಯಾ       Mobile App
       

Kannada Duniya

ಹಣ ನೀಡಲು ವಿಳಂಬ ಮಾಡಿದ್ದಕ್ಕೆ ನಡೆದಿದೆ ಹತ್ಯೆ

ಟ್ಯಾಕ್ಸಿಯಲ್ಲಿ ಪ್ರಯಾಣಿಸಿದವರೊಬ್ಬರು ಇಳಿಯುವಾಗ ಹಣ ನೀಡಲು ವಿಳಂಬ ಮಾಡಿದರೆಂಬ ಕಾರಣಕ್ಕೆ ಇದೇ ಟ್ಯಾಕ್ಸಿಯಲ್ಲಿ ಪ್ರಯಾಣ ಮಾಡಬೇಕಿದ್ದ ನಾಲ್ವರು ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮಂಗಳವಾರ ಬೆಳಿಗ್ಗೆ ಚೆಂಬೂರ್ ನಲ್ಲಿ ಈ ಘಟನೆ ನಡೆದಿದೆ. 36 ವರ್ಷದ ಸುರೇಂದ್ರ ಸಿಂಗ್ ಎಂಬವರು ಇಬ್ಬರೊಂದಿಗೆ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ್ದು, ಚೆಂಬೂರ್ ನಲ್ಲಿ ಇಳಿಯಲು ಮುಂದಾಗಿದ್ದಾರೆ.

ಈ ವೇಳೆ 18 ವರ್ಷದ ಕೃಷ್ಣ ಎಂಬಾತ ಮೂವರು ಅಪ್ರಾಪ್ತರೊಂದಿಗೆ ತರಾತುರಿಯಲ್ಲಿ ಇದೇ ಟ್ಯಾಕ್ಸಿ ಏರಲು ಮುಂದಾಗಿದ್ದು, ಆದರೆ ಸುರೇಂದ್ರ ಸಿಂಗ್ ಚಾಲಕನಿಗೆ ಹಣ ನೀಡಲು ವಿಳಂಬ ಮಾಡಿದ ಕಾರಣ ಆಕ್ರೋಶಗೊಂಡಿದ್ದಾರೆ. ಸುರೇಂದ್ರ ಸಿಂಗ್ ರಿಗೆ ನಾಲ್ವರು ಸೇರಿ ಥಳಿಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪ್ರಾಪ್ತರೂ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆದಿದ್ದು, ಪ್ರಮುಖ ಆರೋಪಿ ಕೃಷ್ಣನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ವೇಳೆ ಮೇ 14 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೂವರು ಅಪ್ರಾಪ್ತರನ್ನು ಬಾಲ ನ್ಯಾಯಮಂಡಳಿಗೆ ಒಪ್ಪಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...