alex Certify
ಕನ್ನಡ ದುನಿಯಾ       Mobile App
       

Kannada Duniya

ಬಲವಂತವಾಗಿ ಎಂಜಲು ಬೂಟು ನೆಕ್ಕಿಸಿದ್ದಕ್ಕೆ ನೊಂದವ ಮಾಡಿದ್ದೇನು?

ದುಷ್ಕರ್ಮಿಗಳು ಬಲವಂತವಾಗಿ ಬೂಟು ನೆಕ್ಕಿಸಿದ್ದರಿಂದ ಮನನೊಂದು ಮುಂಬೈನಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ದಕ್ಷಿಣ ಮುಂಬೈನಲ್ಲಿ ಕಾಸಿಮ್ ಶೇಕ್ ಎಂಬಾತನ ಮೇಲೆ ನಾಲ್ವರು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ಮಾಡಿದ್ದರು.

ಈ ವೇಳೆ ಒಬ್ಬ ಬೂಟಿನ ಮೇಲೆ ಎಂಜಲು ಉಗುಳಿದ್ದ, ನಂತರ ಕಾಸಿಮ್ ಬಳಿ ಬಲವಂತವಾಗಿ ಅದನ್ನು ನೆಕ್ಕಿಸಿದ್ದ. ಅವರಿಂದ ಹೇಗೋ ತಪ್ಪಿಸಿಕೊಂಡು ಕಾಸಿಮ್ ಮನೆ ಸೇರಿದ್ದ. ಆದ್ರೆ ತನಗಾದ ಅವಮಾನ ಅವನನ್ನು ಹತಾಶೆಗೆ ತಳ್ಳಿತ್ತು, ಇದರಿಂದ ನೊಂದು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ.

ಈ ಬಗ್ಗೆ ಕಾಸಿಮ್ ಸೂಸೈಡ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ. ನಾಲ್ವರು ದುಷ್ಕರ್ಮಿಗಳ ಹೆಸರನ್ನೂ ಉಲ್ಲೇಖಿಸಿದ್ದಾನೆ. ಇಸ್ಮಾಯಿಲ್ ಶೇಖ್, ಅಕ್ಬರ್ ಶೇಖ್, ಕರಿಯಾ ಪವ್ಸೆ ಹಾಗೂ ಅಕ್ಬರ್ ಖುರೇಷಿ ತನ್ನ ಸಾವಿಗೆ ಕಾರಣ ಅಂತಾ ಬರೆದಿಟ್ಟಿದ್ದಾನೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...