alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ಯಾಪ್ ರಿಪೇರಿಗೆಂದು ಬಂದವನಿಂದ ಹೀನ ಕೃತ್ಯ

ದೆಹಲಿಯಲ್ಲಿ ಮತ್ತೊಂದು ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ. ಉತ್ತರ ದೆಹಲಿಯಲ್ಲಿ ರಾಷ್ಟ್ರೀಯ ಬ್ಯಾಂಕ್ ನಲ್ಲಿ ಕೆಲಸ ಮಾಡುವ 29 ವರ್ಷದ ಮಹಿಳೆ ಮೇಲೆ ಅತ್ಯಾಚಾರ ನಡೆದಿದೆ.

ನೀರಿನ ಟ್ಯಾಪ್ ರಿಪೇರಿಗೆ ಬಂದ ವ್ಯಕ್ತಿ ಮಹಿಳೆ ಮೇಲೆ ಅತ್ಯಾಚಾರವೆಸಗಿದ್ದಾನಂತೆ. ಕೆಲ ತಿಂಗಳುಗಳ ಹಿಂದೆ ಪೀಡಿತೆ ದೆಹಲಿಗೆ ವರ್ಗವಾಗಿ ಬಂದಿದ್ದಳಂತೆ. ಬ್ಯಾಂಕ್ ಬಳಿಯೇ ಒಂದು ಮನೆಯನ್ನು ಬಾಡಿಗೆ ಪಡೆದಿದ್ದಳಂತೆ. ನಾಲ್ಕು ಅಂತಸ್ತಿನ ಕಟ್ಟಡದ ಕೆಳಗೆ ಮನೆ ಮಾಲೀಕನ ಮಗನ ಜಿಮ್ ಇದೆಯಂತೆ.

ಡಿಸೆಂಬರ್ 19ರಂದು ಮನೆಗೆ ಬಂದ ಮಹಿಳೆಗೆ ಕೆಲಸದಾಳು ನೀರು ಬರ್ತಿಲ್ಲ ಎಂದಿದ್ದಾನೆ. ಮಹಿಳೆ ಜಿಮ್ ಗೆ ಹೋಗಿ ವಿಚಾರಿಸಿದ್ದಾಳೆ. ನೀರಿನ ನಲ್ಲಿ ಕನೆಕ್ಷನ್ ತಪ್ಪಿದ್ದು ನಾಳೆ ಸರಿ ಮಾಡುವುದಾಗಿ ಜಿಮ್ ಮಾಲೀಕ ಹೇಳಿದ್ದಾನೆ. ಆದ್ರೆ ಅಲ್ಲಿದ್ದ ಇನ್ನೊಬ್ಬ ಯುವಕ ರಿಪೇರಿ ಮಾಡುವುದಾಗಿ ಹೇಳಿದ್ದಾನೆ. ಮಹಿಳೆ ಮನೆಗೆ ಬಂದ ವ್ಯಕ್ತಿ ಆಕೆಗೆ ಕಿರುಕುಳ ನೀಡಲು ಶುರುಮಾಡಿದ್ದಾನೆ ಎಂದು ಮಹಿಳೆ ದೂರಿದ್ದಾಳೆ. ಡಿಸೆಂಬರ್ ನಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಎಫ್ಐಆರ್ ದಾಖಲಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...