alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲಕ್ಕೆ ಅಂಜಿ ಯುವಕ ನೇಣಿಗೆ ಶರಣು

ದೆಹಲಿಯ ವೆಲಂಕನಿ ಚರ್ಚ್ ನಲ್ಲಿ 26 ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಮೃತನನ್ನು ರುಬನ್ ಎಂದು ಗುರುತಿಸಲಾಗಿದೆ.

ರುಬನ್ ತನ್ನ ಸ್ನೇಹಿತರ ಬಳಿ ಕೈ ಸಾಲ ಪಡೆದಿದ್ದ, ಈ ಹಣ ಹಿಂದಿರುಗಿಸಲು ರುಬನ್ ಗೆ ಕಷ್ಟವಾಗಿತ್ತು. ಆದ್ರೆ, ಸ್ನೇಹಿತರು ಹಣ ನೀಡುವಂತೆ ಒತ್ತಾಯಿಸುತ್ತಿದ್ದರು. ಹೀಗಾಗಿ ಒತ್ತಡವನ್ನು ತಾಳಲಾಗದೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾನೆ.

ಚರ್ಚ್ ಪಕ್ಕದಲ್ಲಿದ್ದ ಸಿಬ್ಬಂದಿಗಳ ವಸತಿ ನಿಲಯದಲ್ಲಿ ಈ ಘಟನೆ ನಡೆದಿದೆ. ಎಂದಿನಂತೆ ಮೃತನ ತಾಯಿ ರುಬನ್ ನನ್ನು ಬೆಳಗ್ಗೆ ಏಳಿಸಲು ಹೋದ್ರು. ಆದ್ರೆ, ರುಬನ್ ಪ್ರತಿಕ್ರಿಯೆ ನೀಡಿಲ್ಲ. ರೂಮ್ ಬಾಗಿಲು ಹಾಕಿದ್ದರಿಂದ ತಾಯಿ ಒಳಗೆ ಹೋಗಲು ಆಗದೆ ಬಾಗಿಲು ತಟ್ಟಿದ್ದಾರೆ. ಬಳಿಕ ರುಬನ್ ಫ್ಯಾನ್ ಗೆ ನೇಣು ಹಾಕಿಕೊಂಡಿರುವ ಬಗ್ಗೆ ಚರ್ಚ್ ಸಿಬ್ಬಂದಿಗಳು ತಿಳಿಸಿದ್ದಾರೆ.

ಮೃತನಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಸ್ಥಳದಲ್ಲಿ ಯಾವುದೇ ಪತ್ರ ಸಿಕ್ಕಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆತ್ಮಹತ್ಯೆಯ ಹಿಂದಿನ ಕಾರಣವನ್ನು ಹುಡುಕಲು ಮುಂದಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...