alex Certify
ಕನ್ನಡ ದುನಿಯಾ       Mobile App
       

Kannada Duniya

ಬಟ್ಟೆ ಬಿಚ್ಚಲು ಬಂದವನಿಗೆ ಪಂಚ್ ಮಾಡಿ ಪೊಲೀಸರಿಗೊಪ್ಪಿಸಿದ್ಲು ಟೆಕ್ಕಿ

ಒಡಿಶಾದ ಭುವನೇಶ್ವರ ಮೂಲದ 25 ವರ್ಷದ ಮಹಿಳಾ ಟೆಕ್ಕಿಯೊಬ್ಬರು ಲೈಂಗಿಕ ಕಿರುಕುಳ ನೀಡಲೆತ್ನಿಸಿದ ಕಾಮುಕನಿಗೆ ಗೂಸಾ ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬುಧವಾರ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಕುಂದಲಹಳ್ಳಿ ಬಳಿ ಈ ಘಟನೆ ನಡೆದಿದ್ದು, ಯುವತಿ ಊಟ ಮುಗಿಸಿದ ಬಳಿಕ ಪಿಜಿ ಬಳಿಯಿಂದ ವಾಕಿಂಗ್ ಗಾಗಿ ಹೊರಬಂದಿದ್ದು, ಈ ವೇಳೆ ಮದ್ಯದ ಅಮಲಿನಲ್ಲಿದ್ದ ವಿಜಯ್ ಕುಮಾರ್ ಎಂಬಾತ ಆಕೆ ಕೈ ಹಿಡಿದು ಬಟ್ಟೆ ಬಿಚ್ಚಲು ಯತ್ನಿಸಿದ್ದಾನೆ.

ಇದರಿಂದ ಯುವತಿ ಆತಂಕಗೊಂಡಳಾದರೂ ಕೂಡಲೇ ಸಾವರಿಸಿಕೊಂಡು ಆತನಿಗೆ ಪಂಚ್ ಮಾಡಿದ್ದಾಳೆ. ಆರೋಪಿ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಸ್ಥಳೀಯರ ನೆರವಿನೊಂದಿಗೆ ಆತನನ್ನು ಹಿಡಿದು ಮಾರತ್ ಹಳ್ಳಿ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...