alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ತೆಯ ಅಂತ್ಯಸಂಸ್ಕಾರಕ್ಕೆ ಬಂದವ ನಾದಿನಿ ಮೇಲೆರಗಿದ

16 ವರ್ಷದ ನಾದಿನಿ ಮೇಲೆ ಅತ್ಯಾಚಾರ ಮಾಡಿದ ಆರೋಪದ ಮೇಲೆ 24 ವರ್ಷದ ವ್ಯಕ್ತಿಯನ್ನು ಮುಂಬೈನಲ್ಲಿ ಬಂಧಿಸಲಾಗಿದೆ. ಅತ್ತೆಯ ಅಂತ್ಯಸಂಸ್ಕಾರಕ್ಕೆ ಬಂದಿದ್ದ ಅಳಿಯ ಈ ನೀಚ ಕೃತ್ಯ ಎಸಗಿದ್ದಾನೆ. ಆರೋಪಿ ರಾಜ್ಕೋಟ್ ಮೂಲದವನು. ಪತ್ನಿಯ ಜೊತೆ ಉತ್ತರಪ್ರದೇಶದಲ್ಲಿ ವಾಸವಾಗಿದ್ದಾನೆ.

ಅತ್ತೆ ತೀರಿಕೊಂಡಿದ್ರಿಂದ ಅವಳ ಅಂತ್ಯಸಂಸ್ಕಾರಕ್ಕಾಗಿ ಮುಂಬೈಗೆ ಬಂದಿದ್ದ. 16 ವರ್ಷದ ಬಾಲಕಿ ತನ್ನ ತಂಗಿಯ ಜೊತೆ ಮಲಗಿದ್ಲು. ಇದೇ ಸಮಯಕ್ಕಾಗಿ ಕಾಯುತ್ತಿದ್ದ ಆಕೆಯ ಬಾವ ಅತ್ಯಾಚಾರಕ್ಕೆ ಮುಂದಾಗಿದ್ದಾನೆ. ಕೂಡಲೇ ಭಯದಿಂದ ಬಾಲಕಿ ಅಳಲಾರಂಭಿಸಿದ್ಲು.

ಪಕ್ಕದಲ್ಲೇ ಮಲಗಿದ್ದ ಅವಳ ತಂಗಿಗೂ ಎಚ್ಚರವಾಗಿತ್ತು, ಆಕೆ ಕಾಮುಕನನ್ನು ತಡೆಯಲು ಯತ್ನಿಸಿದ್ದಾಳೆ. ಆದ್ರೆ ಅವಳ ಮೇಲೆ ಹಲ್ಲೆ ಮಾಡಿದ ಆತ ಬೇರೆ ಕೋಣೆಯಲ್ಲಿ ಕೂಡಿ ಹಾಕಿದ್ದ. ನಂತರ ಅಪ್ರಾಪ್ತ ನಾದಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ.

ನಂತರ ನೊಂದ ಬಾಲಕಿ ನೆರೆಮನೆಯವರಿಗೆ ವಿಷಯ ತಿಳಿಸಿದ್ಲು. ಅವರು ಬಂದು ನೋಡುವಷ್ಟರಲ್ಲಿ ಕಾಮುಕ ಪರಾರಿಯಾಗಿದ್ದ. ಬಳಿಕ ಪೊಲೀಸರಿಗೆ ದೂರು ನೀಡಲಾಯ್ತು. ನಾಲ್ಕು ದಿನಗಳ ಹುಡುಕಾಟದ ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...