alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಲೂ ಫಿಲಂ ನೋಡಿದ ಕಾಮುಕನಿಂದ ತಾಯಿ ಮೇಲೆ ಬಲಾತ್ಕಾರ

ಬ್ಲೂ ಫಿಲಂ ನೋಡುತ್ತಿದ್ದ ಯುವಕನೊಬ್ಬ ಕಾಮದ ಮದವೇರಿ ತಾಯಿ ಮೇಲೆಯೇ ಅತ್ಯಾಚಾರ ಎಸಗಿದ ಶಾಕಿಂಗ್ ಘಟನೆ ಗುಜರಾತ್ ನ ಪಾಟನ್ ಟೌನ್ ಜಲ್ ಚೌಕ್ ಏರಿಯಾದಲ್ಲಿ ನಡೆದಿದೆ.

22 ವರ್ಷದ ಯುವಕ 46 ವರ್ಷದ ತನ್ನ ತಾಯಿ ಮೇಲೆ ಮನೆಯಲ್ಲೇ ಅತ್ಯಾಚಾರ ಎಸಗಿದ್ದಾನೆ. ತಾಯಿ, 20 ವರ್ಷದ ಸಹೋದರಿಯ ಎದುರಲ್ಲೇ ಮೊಬೈಲ್ ನಲ್ಲಿ ಕಾಮುಕ ಬ್ಲೂ ಫಿಲಂ ನೋಡುತ್ತಿದ್ದ. ತಡರಾತ್ರಿಯವರೆಗೂ ಬ್ಲೂ ಫಿಲಂ ನೋಡುವುದನ್ನು ರೂಢಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ರಾತ್ರಿ ನೀರು ಕುಡಿಯುವ ನೆಪದಲ್ಲಿ ತಾಯಿಯ ರೂಂ ಪ್ರವೇಶಿಸಿದ ಯುವಕ ಅತ್ಯಾಚಾರ ಎಸಗಿದ್ದಾನೆ. ಐ.ಪಿ.ಸಿ. ಸೆಕ್ಷನ್ 376, 504 ರ ಅಡಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಆರೋಪಿ ಹಿಂದೆಯೂ ಹಲವು ಬಾರಿ ತಾಯಿಯೊಂದಿಗೆ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ್ದು, ಅವರು ಮಾನಸಿಕವಾಗಿ ನೊಂದಿದ್ದರು. ಪತಿಗೆ ವಿಷಯ ತಿಳಿಸಿದ್ದು, ಅಹಮದಾಬಾದ್ ನಲ್ಲಿದ್ದ ಹಿರಿಯ ಮಗನನ್ನು ಕರೆಸಿಕೊಂಡಿದ್ದಾರೆ. ಆತನೊಂದಿಗೆ ಚರ್ಚಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...