alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಮುಕನನ್ನು ಬಲೆಗೆ ಕೆಡವಿದೆ ಅಮೆರಿಕದ ಈ ಸಾಫ್ಟ್ ವೇರ್

ರಾಷ್ಟ್ರೀಯ ತನಿಖಾ ದಳ, ಅಮೆರಿಕದ ಬ್ಲರ್ಡ್ ಇಮೇಜ್ ಫಿಲ್ಟರ್ ಸಾಫ್ಟ್ ವೇರ್ ಅನ್ನು ಖರೀದಿ ಮಾಡಿತ್ತು. ಇದರಿಂದಾಗಿ ಗ್ಯಾಂಗ್ ರೇಪ್ ಆರೋಪಿಯೊಬ್ಬ ಪೊಲೀಸರ ಬಲೆಗೆ ಬಿದ್ದಿದ್ದಾನೆ. 29 ವರ್ಷದ ಆಟೋ ಚಾಲಕನನ್ನು ಚಂಡೀಗಢ ಪೊಲೀಸರು ಬಂಧಿಸಿದ್ದಾರೆ.

ಕಾಮುಕ ಬಳಸಿದ್ದ ಆಟೋ ಕೂಡ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು. ಆದ್ರೆ ನಂಬರ್ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಆರೋಪಿಯ ಮುಖಚಹರೆಯೂ ಸರಿಯಾಗಿ ಗೋಚರಿಸಿರಲಿಲ್ಲ. ಹಾಗಾಗಿ ಸೈಬರ್ ತಜ್ಞರು ಈ ಸಾಫ್ಟ್ ವೇರ್ ಖರೀದಿ ಮಾಡುವಂತೆ ಪೊಲೀಸರಿಗೆ ಸಲಹೆ ನೀಡಿದ್ದರು.

ಕೊನೆಗೆ ಎನ್ ಐ ಎ ಕೂಡ ಇದಕ್ಕೆ ಅನುಮತಿ ಕೊಟ್ಟಿತ್ತು. ಆ ಸಾಫ್ಟ್ ವೇರ್ ನಲ್ಲಿ ಆರೋಪಿಯ ಚಹರೆ ಹಾಗೂ ಆಟೋದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಗೋಚರಿಸಿದೆ. ಅತ್ಯಾಚಾರ ಪ್ರಕರಣದ ತನಿಖೆ ನಡೆಸುತ್ತಿರೋ ತಂಡದ ನೇತೃತ್ವ ವಹಿಸಿದ್ದ ಇನ್ಸ್ ಪೆಕ್ಟರ್ ನಸೀಬ್ ಸಿಂಗ್, ಅಮೆರಿಕದಲ್ಲಿರುವ ತಮ್ಮ ಸ್ನೇಹಿತರಿಂದ ಸಾಫ್ಟ್ ವೇರ್ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ರು.

ಕಾಮುಕ ಇರ್ಫಾನ್ ಬಳಸಿದ್ದ ಆಟೋ ಬೆನ್ನು ಬಿದ್ದ ಪೊಲೀಸರು ಅದನ್ನಾತ ಖರೀದಿಸಿದ ಸ್ಥಳದಿಂದ್ಲೂ ಸಾಕಷ್ಟು ಮಾಹಿತಿ ಕಲೆಹಾಕಿದ್ರು. ಅಮೆರಿಕದಿಂದ ಕೊಂಡುಕೊಂಡ ಸಾಫ್ಟ್ ವೇರ್ ನಲ್ಲಿ ಆಟೋದ ಮೂರು ನೋಂದಣಿ ಸಂಖ್ಯೆಗಳು ಸ್ಪಷ್ಟವಾಗಿ ಕಂಡಿದ್ದರಿಂದ ಅದನ್ನು ಪತ್ತೆ ಮಾಡುವುದು ಸುಲಭವಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...