alex Certify
ಕನ್ನಡ ದುನಿಯಾ       Mobile App
       

Kannada Duniya

ಪಿ.ಜಿ.ಗೆ ಹೋಗ್ತಿದ್ದ ಹುಡುಗಿ ಮೇಲೆ ಗ್ಯಾಂಗ್ ರೇಪ್

ಚಂಡೀಗಢದಲ್ಲಿ ತಲೆ ತಗ್ಗಿಸುವಂತ ಘಟನೆ ನಡೆದಿದೆ. ಪಿ.ಜಿ. ಗೆ ಆಟೋದಲ್ಲಿ ಹೋಗ್ತಿದ್ದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸಿಕೊಳ್ತಿದ್ದ ಆಟೋ ಚಾಲಕನ ಮುಖ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಮೂಲತಃ ಮೊಹಾಲಿಯ ಯುವತಿ ಚಂಡೀಗಢದಲ್ಲಿ ನೌಕರಿ ಮಾಡುವ ಜೊತೆಗೆ ಕೋಚಿಂಗ್ ಕ್ಲಾಸಿಗೆ ಹೋಗ್ತಿದ್ದಳು. ಮೂರು ದಿನಗಳ ಹಿಂದಷ್ಟೇ ಕೋಚಿಂಗ್ ಕ್ಲಾಸಿಗೆ ಹೋಗ್ತಿದ್ದ ಯುವತಿಗೆ ರಸ್ತೆ ಬಗ್ಗೆ ಮಾಹಿತಿಯಿರಲಿಲ್ಲ. ಸೆಕ್ಟರ್ 37ರಿಂದ ಸೆಕ್ಟರ್ 53ಕ್ಕೆ ಹೋಗಲು ಯುವತಿ ಆಟೋ ಹಿಡಿದಿದ್ದಾಳೆ. ಆಟೋದಲ್ಲಿ ಯುವತಿ ಬಿಟ್ಟು ಇನ್ನೂ ಇಬ್ಬರು ಇದ್ದರು ಎನ್ನಲಾಗಿದೆ.

ಸುಳ್ಳು ದಾರಿ ಹೇಳಿ ಸೆಕ್ಟರ್ 57ಕ್ಕೆ ಕರೆದೊಯ್ದ ಚಾಲಕ ಮತ್ತಾತನ ಸ್ನೇಹಿತರು ಅಲ್ಲಿ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ನಂತ್ರ ಯುವತಿಯನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಯುವತಿ ಪೊಲೀಸರಿಗೆ ವಿಷ್ಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಯುವತಿಗೆ ಚಿಕಿತ್ಸೆ ಕೊಡಿಸಿದ್ದಾರೆ.

ಘಟನೆಗೂ ಮುನ್ನ ಆಟೋ ಚಾಲಕ ಆಟೋಕ್ಕೆ ಪೆಟ್ರೋಲ್ ತುಂಬಿಸಿದ್ದಾನೆ. ಈ ವೇಳೆ ಆತನ ಮುಖ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಈ ವಿಷ್ಯ ಹುಡುಗಿಗೆ ತಿಳಿದಿರಲಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ ಶುರುಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...