alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿ ಸಾವಿಗೆ ಕಾರಣವಾಯ್ತು ಬಾಡಿಗೆ ವಿಚಾರ

gurgaon-death-759ಪಿಜಿಯಲ್ಲಿದ್ದುಕೊಂಡು ಹೋಟೆಲ್ ಮ್ಯಾನೇಜ್ಮೆಂಟ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಬಾಡಿಗೆ ನೀಡುವ ವಿಚಾರಕ್ಕೆ ಹತ್ಯೆಯಾಗಿದ್ದಾನೆ. ಪಿಜಿ ಮಾಲೀಕ ಬಾಡಿಗೆ ನೀಡಲಿಲ್ಲವೆಂಬ ಕಾರಣಕ್ಕೆ ವಿದ್ಯಾರ್ಥಿಯನ್ನು ಐದನೇ ಅಂತಸ್ತಿನ ಬಾಲ್ಕನಿಯಿಂದ ಹೊರ ತಳ್ಳಿ ಆತನ ಸಾವಿಗೆ ಕಾರಣನಾಗಿದ್ದಾನೆ.

ಈ ಘಟನೆ ಗುರ್ಗಾಂವ್ ನಲ್ಲಿ ನಡೆದಿದ್ದು, 20 ವರ್ಷದ ರಮೇಶ್ ಸಿಂಗ್ ಎಂಬ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ಸಾವಿಗೀಡಾಗಿದ್ದಾನೆ. ಸತ್ಬೀರ್ ಸಿಂಗ್ ಎಂಬಾತ ನಡೆಸುತ್ತಿದ್ದ ಪಿಜಿಯಲ್ಲಿ 50 ಕ್ಕೂ ಹೆಚ್ಚು ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳು ವಾಸವಾಗಿದ್ದರು.

ಪಿಜಿಯಲ್ಲಿ ವಿದ್ಯುತ್, ನೀರು ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರದ ಕಾರಣ ವಿದ್ಯಾರ್ಥಿಗಳು ಪಿಜಿ ಮಾಲೀಕನೊಡನೆ ಜಗಳವಾಡಿದ್ದು, ಬಾಡಿಗೆ ನೀಡಲು ನಿರಾಕರಿಸಿದ್ದರು. ಇದರಿಂದ ಕೆರಳಿದ ಆತ ಬುಧವಾರ ರಾತ್ರಿ ತನ್ನ ಇಬ್ಬರು ಪುತ್ರರು ಹಾಗೂ ಐದಾರು ಮಂದಿ ಸಹಚರರೊಡನೆ ಆಗಮಿಸಿ ರಾಡ್ ಗಳಿಂದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲು ಆರಂಭಿಸಿದ್ದಾನೆ.

ಭಯಭೀತರಾದ ವಿದ್ಯಾರ್ಥಿಗಳು ತಮ್ಮ ರೂಮಿನ ಬಾಗಿಲು ಹಾಕಿಕೊಂಡರೂ ಬಾಗಿಲು ಮುರಿದು ಹಲ್ಲೆ ನಡೆಸಲಾಗಿದೆ. ಈ ವೇಳೆ ರಮೇಶ್ ಸಿಂಗ್ ಐದನೇ ಅಂತಸ್ತಿನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ರಮೇಶ್ ಸಿಂಗ್ ನನ್ನು ಪಿಜಿ ಮಾಲೀಕನೇ ಕೆಳಗೆ ತಳ್ಳಿದ್ದಾನೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು, ಪರಾರಿಯಾಗಿರುವ ಪಿಜಿ ಮಾಲೀಕ ಸತ್ಬೀರ್ ಸಿಂಗ್ ಮತ್ತಾತನ ಮಕ್ಕಳ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...