alex Certify
ಕನ್ನಡ ದುನಿಯಾ       Mobile App
       

Kannada Duniya

ವೇಗದ ಚಾಲನೆಗೆ ಜೀವವನ್ನೇ ಕಳೆದುಕೊಂಡ ಯುವಕ

ಅತಿಯಾದ ವೇಗದಲ್ಲಿದ್ದ ಕಾರು ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ 20 ವರ್ಷದ ಯುವಕ ಸಾವನ್ನಪ್ಪಿದ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಚಿಂಚ್ವಾಡ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮೃತ ಯುವಕ ಶುಭಮ್ ಜಾದವ್ ಎಂದು ತಿಳಿದು ಬಂದಿದೆ.

ಜಾದವ್ ಜೊತೆ ಆತನ ಸೋದರ ಸಂಬಂಧಿ ಹೃಷಿಕೇಶ್ ಪವಾರ್ ಕಾರಿನಲ್ಲಿದ್ದ. ಈತ ಕಾರನ್ನು ವೇಗವಾಗಿ ಚಲಿಸುವಂತೆ ಜಾದವ್ ಗೆ ಪ್ರಚೋದಿಸುತ್ತ, ಅದನ್ನ ಇನ್ಸ್ಟ್ರಾಗ್ರಾಮ್ ಲೈವ್ ಪ್ರಸಾರಕ್ಕೆ ಹಾಕಿದ್ದ. ಈ ವಿಡಿಯೋ ಪ್ರಕಾರ ಕಾರು ನಿಯಂತ್ರಣ ಕಳೆದುಕೊಂಡಾಗ 120 ಕಿ.ಮೀ. ವೇಗದಲ್ಲಿತ್ತು ಎಂದು ತಿಳಿದು ಬಂದಿದೆ.

ಅಪಘಾತ ಸಂಭವಿಸುವುದಕ್ಕೂ ಮುನ್ನ ಶುಭಮ್ ಸೀಟ್ ಬೆಲ್ಟ್ ಕೂಡಾ ಹಾಕಿರಲಿಲ್ಲ. ಹೀಗಾಗಿ ಡಿವೈಡರ್ ಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಶುಭಂ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿನಲ್ಲಿದ್ದ ಶುಭಂ ಸಂಬಂಧಿ, ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...