alex Certify
ಕನ್ನಡ ದುನಿಯಾ       Mobile App
       

Kannada Duniya

ಚಾದರವನ್ನೇ ಹಗ್ಗದಂತೆ ಬಳಸಿ ಖೈದಿಗಳು ಎಸ್ಕೇಪ್

jail

ಬಿಹಾರ ಮೂಲದ ಇಬ್ಬರು ಖತರ್ನಾಕ್ ಖೈದಿಗಳು ವಾರಂಗಲ್ ಜೈಲಿನಿಂದ ಪರಾರಿ ಆಗಿದ್ದಾರೆ. ಹೊದೆಯಲು ಕೊಟ್ಟಿದ್ದ ಚಾದರವನ್ನೇ ಹಗ್ಗದಂತೆ ಬಳಸಿ ರಾಜೇಶ್ ಯಾದವ್ ಹಾಗೂ ಸೈನಿಕ್ ಸಿಂಗ್ ಜೈಲಿನ ಗೋಡೆ ಹಾರಿದ್ದಾರೆ. ರಾಜೇಶ್ ಯಾದವ್ ಕೊಲೆ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡು ಜೈಲು ಸೇರಿದ್ದ. ಮತ್ತೋರ್ವ ಖೈದಿ ಸೈನಿಕ್ ಸಿಂಗ್ ನ್ಯಾಯಾಲಯದಲ್ಲಿನ ವಿಚಾರಣೆಗೆ ಸಂಬಂಧಪಟ್ಟಂತೆ ಕಾರಾಗೃಹ ಸೇರಿದ್ದ.

ಈ ಮೊದಲು ಅವರನ್ನು ಹೈದ್ರಾಬಾದ್ ನ ಚೆರ್ಲಪಲ್ಲಿ ಜೈಲಿನಲ್ಲಿಡಲಾಗಿತ್ತು. 2 ತಿಂಗಳ ಹಿಂದಷ್ಟೆ ವಾರಂಗಲ್ ಸೆಂಟ್ರಲ್ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು. ಇಲ್ಲಿಂದ ತಪ್ಪಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ರಾಜೇಶ್ ಹಾಗೂ ಸೈನಿಕ್ ರಾತ್ರೋರಾತ್ರಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಎಲ್ಲರೂ ನಿದ್ದೆ ಹೋದ ಬಳಿಕ ಹೊದೆಯಲು ನೀಡಿದ್ದ ಚಾದರವನ್ನು ಹಗ್ಗದಂತೆ ಸುತ್ತಿ ಕೆಳಕ್ಕೆ ಬಿಟ್ಟು ಗೋಡೆ ಇಳಿದಿದ್ದಾರೆ. ತಪ್ಪಿಸಿಕೊಂಡಿರುವ ಖೈದಿಗಳಿಗಾಗಿ ಪೊಲೀಸರು ತೀವ್ರ ಶೋಧ ನಡೆಸ್ತಿದ್ದಾರೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...