alex Certify
ಕನ್ನಡ ದುನಿಯಾ       Mobile App
       

Kannada Duniya

ಜಾನುವಾರು ಸಾಗಿಸುತ್ತಿದ್ದವರ ಅಮಾನುಷ ಹತ್ಯೆ

noose-on-tree

ದಾದ್ರಿ ಪ್ರಕರಣವನ್ನು ನೆನಪಿಸುವಂತಹ ಘಟನೆಯೊಂದು ಜಾರ್ಖಂಡ್ ನಲ್ಲಿ ನಡೆದಿದ್ದು, ಜಾನುವಾರುಗಳನ್ನು ಹಿಡಿದುಕೊಂಡು ಹೋಗುತ್ತಿದ್ದ ಇಬ್ಬರನ್ನು ಉದ್ರಿಕ್ತರ ಗುಂಪು ಅಮಾನುಷವಾಗಿ ಹತ್ಯೆ ಮಾಡಿದೆ.

ಈ ಘಟನೆ ಜಾರ್ಖಂಡ್ ನ ಲಾತೇರಾ ಜಿಲ್ಲೆಯಲ್ಲಿ ನಡೆದಿದ್ದು, ಜಾನುವಾರು ವ್ಯಾಪಾರಿಯಾದ 35 ವರ್ಷದ ಮಹಮ್ಮದ್ ಮಜ್ಲೂಮ್ ಹಾಗೂ 15 ವರ್ಷದ ಅಜಾದ್ ಖಾನ್ ಅಲಿಯಾಸ್ ಇಬ್ರಾಹಿಂ ಉದ್ರಿಕ್ತ ಗುಂಪಿನಿಂದ ಥಳಿತಕ್ಕೊಳಗಾಗಿ ಮೃತಪಟ್ಟವರಾಗಿದ್ದಾರೆ.

ಇವರುಗಳು ಮಾರುಕಟ್ಟೆಗೆ ಜಾನುವಾರು ಹಿಡಿದುಕೊಂಡು ಹೋಗುತ್ತಿದ್ದುದ್ದನ್ನೇ ತಪ್ಪಾಗಿ ಅರ್ಥೈಸಿದ ಗುಂಪು ಅವರ ಮೇಲೆ ತೀವ್ರವಾಗಿ ಹಲ್ಲೆ ಮಾಡಿದೆ. ಬಳಿಕ ಕೈಗಳನ್ನು ಹಿಂದೆ ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ನಂತರ ಮರಕ್ಕೆ ನೇಣು ಹಾಕಲಾಗಿದೆ. ಹತ್ಯೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...