alex Certify
ಕನ್ನಡ ದುನಿಯಾ       Mobile App
       

Kannada Duniya

ಸೋದರಿಯ ಶವದ ಪಕ್ಕದಲ್ಲೇ ಮಲಗಿದ್ದ ಕಿರಾತಕ

dead ss

ನವದೆಹಲಿ: ಸಹೋದರತೆಯ ಸಂದೇಶ ಸಾರುವ ರಕ್ಷಾಬಂಧನ ನಡೆದ 2 ದಿನಗಳಲ್ಲೇ, ರಾಖಿ ಕಟ್ಟಿದ್ದ ಸಹೋದರಿಯನ್ನೇ ಕೊಂದು, ಆಕೆಯ ಶವದ ಪಕ್ಕದಲ್ಲೇ ಕಿರಾತಕನೊಬ್ಬ ರಾತ್ರಿ ಕಳೆದ ಘಟನೆ ನಡೆದಿದೆ.

ನವದೆಹಲಿಯ ಮುಖರ್ಜಿ ನಗರದಲ್ಲಿ 28 ವರ್ಷದ ಮಹಿಳೆಯನ್ನು, ಆಕೆಯ ಸಹೋದರನೇ ಕ್ರೂರವಾಗಿ ಕೊಲೆ ಮಾಡಿ, ಶವದ ಮಗ್ಗುಲಲ್ಲೇ ಮಲಗಿದ್ದಾನೆ. ಬೆಳಿಗ್ಗೆ ಎದ್ದು ಅಲ್ಲಿಂದ ಪರಾರಿಯಾಗಿದ್ದಾನೆ. ಮಹಿಳೆಯ 10 ವರ್ಷದ ಪುತ್ರ ನಡೆದ ಘಟನೆಯನ್ನು ಬಿಡಿಸಿಟ್ಟಿದ್ದು, ಅಮ್ಮನ ಕೈ ಕಾಲು ಕಟ್ಟಿಹಾಕಿದ ಮಾವ, ಬಾಯಿಗೆ ಮರದ ತುಂಡು ಹಾಕಿದ್ದಾಗಿ ಹೇಳಿಕೆ ನೀಡಿದ್ದಾನೆ. ಪತಿಯಿಂದ ದೂರವಾಗಿದ್ದ ಮಹಿಳೆ ಸೋದರನ ಮನೆಯಲ್ಲಿ ವಾಸವಾಗಿದ್ದಳು.

ಸೋದರನ ಪತ್ನಿ ಗಂಡನನ್ನು ತೊರೆದು ತವರಿಗೆ ಹೋಗಿದ್ದಳು. ಇದರಿಂದ ಮದ್ಯವ್ಯಸನಿಯಾಗಿದ್ದ ಪಾತಕಿ ಸಹೋದರಿಗೆ ಕಿರುಕುಳ ನೀಡಿ, ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...