alex Certify
ಕನ್ನಡ ದುನಿಯಾ       Mobile App
       

Kannada Duniya

ಅಪ್ರಾಪ್ತನ ಲಿವ್ ಇನ್ ಸಂಗಾತಿಯಾದ ವಿವಾಹಿತೆ ಗತಿ ಹೀಗಾಯ್ತು…!

ಪತಿ ಬಿಟ್ಟು ಅಪ್ರಾಪ್ತನನ್ನು ಪ್ರೀತಿಸಿದ್ದು ಮಹಿಳೆಗೆ ದುಬಾರಿಯಾಗಿ ಪರಿಣಮಿಸಿದೆ. ಅಪ್ರಾಪ್ತ ಪ್ರೇಮಿ ಮಹಿಳೆ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಆಕೆ ತನ್ನ ಮೇಲೆ ಸಂಶಯ ವ್ಯಕ್ತಪಡಿಸುತ್ತಿದ್ದಳು. ಈ ಕಾರಣಕ್ಕೆ ಮಲಗಿದ್ದಾಗ ಹತ್ಯೆಗೈದೆ ಎಂದು ಅಪ್ರಾಪ್ತ ಹೇಳಿದ್ದಾನೆ.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಅಪ್ರಾಪ್ತ ಅಪರಾಧಿ ಎಂದು ತೀರ್ಪು ನೀಡಿದೆ. ಶುಕ್ರವಾರ ಅಪರಾಧಿ ಅಪ್ರಾಪ್ತನಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದೆ. ಘಟನೆ ಆಗಸ್ಟ್ 10, 2016ರಂದು ಚಂಡೀಗಢದ ಫೈದಾನ್ ನಲ್ಲಿ ನಡೆದಿತ್ತು. 19 ವರ್ಷದ ಮಹಿಳೆಯನ್ನು 17 ವರ್ಷದ ಪ್ರೇಮಿ ಕೊಲೆ ಮಾಡಿದ್ದ.

ಮೃತಳ ಸಹೋದರಿ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರು ಮಾಡಿದ್ದರು, ಘಟನೆ ನಡೆದ 24 ಗಂಟೆಯಲ್ಲಿಯೇ ಲಿವ್ ಇನ್ ಸಂಗಾತಿ 17 ವರ್ಷದ ಅಪ್ರಾಪ್ತನನ್ನು ಬಂಧಿಸಿದ್ದರು. ಮೃತಳಿಗೆ ಈ ಹಿಂದೆಯೇ ಮದುವೆಯಾಗಿತ್ತು. ಪತಿ ಹಾಗೂ ಮಗುವನ್ನು ಬಿಟ್ಟು 6 ತಿಂಗಳಿಂದ ಅಪ್ರಾಪ್ತನ ಜೊತೆ ಲಿವ್ ಇನ್ ನಲ್ಲಿದ್ದಳು ಮಹಿಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...