alex Certify
ಕನ್ನಡ ದುನಿಯಾ       Mobile App
       

Kannada Duniya

ತಮ್ಮನ ಹೇಯ ಕೃತ್ಯವನ್ನು ವಿಡಿಯೋ ಮಾಡಿದ್ಲು ಸಹೋದರಿ

ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ 22 ವರ್ಷದ ಯುವಕನೊಬ್ಬ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಆತನ ಸಹೋದರಿ ಈ ಕೃತ್ಯವನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾಳೆ. ಯುವಕನ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿದ್ದು, ಆತನ ಸಹೋದರಿ ಮೇಲೆ ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪವಿದೆ.

ಆದ್ರೆ ಪೊಲೀಸರಿಗೆ ಆಕೆ ರೆಕಾರ್ಡ್ ಮಾಡಿದ್ದಾಳೆ ಎನ್ನಲಾದ ವಿಡಿಯೋ ಇನ್ನೂ ಲಭ್ಯವಾಗಿಲ್ಲ. ಈ ಪ್ರಕರಣ ಇಬ್ಬರು ಮಹಿಳೆಯರ ನಡುವಣ ಜಟಾಪಟಿ ಅನ್ನೋದು ಪೊಲೀಸರ ಅನುಮಾನ. ರುಕ್ಸಾನಾ ಎಂಬ ಮಹಿಳೆ ಸಮ್ರೀನ್ ಎಂಬಾಕೆಯ ಮೇಲೆ ಕಳ್ಳತನದ ಪ್ರಕರಣ ದಾಖಲಿಸಿದ್ಲು.

ಅದಕ್ಕೆ ಪ್ರತಿಯಾಗಿ ಸಮ್ರೀನ್ ಅತ್ಯಾಚಾರ ಯತ್ನ ನಡೆದಿದೆ ಅಂತಾ ರುಕ್ಸಾನಾ ಕುಟುಂಬದವರ ವಿರುದ್ಧ ದೂರು ನೀಡಿದ್ಲು. ಅದರ ಬೆನ್ನಲ್ಲೇ ರುಕ್ಸಾನಾ ತನ್ನ ಸೋದರ ಸೊಸೆ, 16 ವರ್ಷದ ಬಾಲಕಿ ಮೇಲೆ ಸಮ್ರೀನ್ ಸಹೋದರ ಅತ್ಯಾಚಾರ ಮಾಡಿದ್ದಾನೆ. ಅದನ್ನು ಸಮ್ರೀನ್ ವಿಡಿಯೋ ಮಾಡಿಕೊಂಡಿದ್ದಾಳೆ ಅಂತಾ ಪ್ರಕರಣ ದಾಖಲು ಮಾಡಿದ್ದಾಳೆ.

ಈ ಮಹಿಳೆಯರು ಮೊದಲು ಒಂದೇ ಮನೆಯಲ್ಲಿ ವಾಸವಾಗಿದ್ದರಂತೆ. ಕೆಲ ದಿನಗಳ ಹಿಂದಷ್ಟೆ ಜಗಳವಾಡಿಕೊಂಡು ಬೇರೆಯಾಗಿದ್ದರು. ಅದಾದ್ಮೇಲೆ ಒಬ್ಬರ ಮೇಲೊಬ್ಬರು ದೂರು ದಾಖಲಿಸುತ್ತಿದ್ದಾರೆ. ಸದ್ಯ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎನ್ನಲಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...