alex Certify
ಕನ್ನಡ ದುನಿಯಾ       Mobile App
       

Kannada Duniya

16 ವರ್ಷದ ಬಾಲಕಿ ಮಗುವಿಗೆ ತಂದೆಯಾದ 12ರ ಹುಡುಗ

ಕೇರಳದ ಕೊಚ್ಚಿಯಲ್ಲಿ ಅಪ್ರಾಪ್ತ ಹುಡುಗಿ ಮೇಲೆ ಅತ್ಯಾಚಾರವೆಸಗಿದ ಘಟನೆ ಬೆಳಕಿಗೆ ಬಂದಿದೆ. 16 ವರ್ಷದ ಬಾಲಕಿ ಮಗುವಿಗೆ ಜನ್ಮ ನೀಡಿದ್ದಾಳೆ. ಆಶ್ಚರ್ಯಕರ ವಿಷ್ಯವೆಂದ್ರೆ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದು ಮತ್ಯಾರೂ ಅಲ್ಲ ಆಕೆ ಸಹೋದರ ಸಂಬಂಧಿ 12 ವರ್ಷದ ಹುಡುಗ.

ಬಾಲಕಿಗೆ ಹೆರಿಗೆಯಾಗಿ ಎರಡು ತಿಂಗಳು ಕಳೆದಿದೆ. ಪೀಡಿತೆ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪ್ರಾಪ್ತನನ್ನು ಬಂಧಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಡಿಎನ್ಎ ಪರೀಕ್ಷೆ ನಡೆದಿದೆ. ಹುಡುಗಿ ಕುಟುಂಬಸ್ಥರು ಆಘಾತದಲ್ಲಿದ್ದಾರೆ.

ಎರಡು ತಿಂಗಳ ಮಗುವನ್ನು ತಮ್ಮ ಬಳಿ ಇಟ್ಟುಕೊಳ್ಳಲು ಕುಟುಂಬಸ್ಥರು ನಿರಾಕರಿಸಿದ್ದಾರೆ. ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ನೀಡಲಾಗಿದೆ. ಎಂಟನೇ ತರಗತಿ ಓದುತ್ತಿರುವ ಸಹೋದರ ಸಂಬಂಧಿ ಮನೆ ಪಕ್ಕದಲ್ಲಿಯೇ ವಾಸವಾಗಿದ್ದು, ಆತನೇ ಅತ್ಯಾಚಾರವೆಸಗಿದ್ದಾನೆಂದು ಬಾಲಕಿ ಆರೋಪ ಮಾಡಿದ್ದಾಳೆ. ಆದ್ರೆ ಇದಕ್ಕೆಲ್ಲ ಬಾಲಕಿ ಕಾರಣ ಎಂದು ಹುಡುಗ ಆರೋಪ ಮಾಡಿದ್ದಾನೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...