alex Certify
ಕನ್ನಡ ದುನಿಯಾ       Mobile App
       

Kannada Duniya

ಪೊಲೀಸರ ಕುರಿತಾಗಿ ಹೊರಬಿತ್ತು ಅಚ್ಚರಿಯ ಸಂಗತಿ

ನವದೆಹಲಿ: ದೆಹಲಿ ಮಹಿಳೆಯರು ಸುರಕ್ಷಿತವಾಗಿಲ್ಲ. ಅತ್ಯಾಚಾರ, ಲೈಂಗಿಕ ಕಿರುಕುಳ ಪ್ರಕರಣಗಳು ದೆಹಲಿಯಲ್ಲಿ ಹೆಚ್ಚಾಗಿವೆ.

ದೆಹಲಿಯ 150 ಪೊಲೀಸರು ಅತ್ಯಾಚಾರದ ಆರೋಪವನ್ನು ಎದುರಿಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ, ರಕ್ಷಣೆಯ ಜವಾಬ್ದಾರಿ ಇರುವ ಪೊಲೀಸರೇ ಇಂತಹ ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬಹುತೇಕ ಆರೋಪಗಳಲ್ಲಿ ಪೊಲೀಸರು ಬಚಾವ್ ಆಗುತ್ತಿದ್ದಾರೆ.

ಅಂತಹವರು ತಪ್ಪಿತಸ್ಥರೆಂದು ಕಂಡುಹಿಡಿಯಲಾಗುತ್ತಿಲ್ಲ. ಇಲಾಖೆಯಲ್ಲಿಯೇ ಅವರಿಗೆ ರಕ್ಷಣೆ ಸಿಗುತ್ತಿದೆ. ಅತ್ಯಾಚಾರ, ಲೈಂಗಿಕ ಕಿರುಕುಳದಂತಹ ಆರೋಪಗಳು 150 ಪೊಲೀಸರ ಮೇಲೆ ಕೇಳಿ ಬಂದಿದ್ದರೂ, ಕಳೆದ 6 ವರ್ಷಗಳಲ್ಲಿ 28 ಪ್ರಕರಣಗಳಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದೆ. 122 ಪ್ರಕರಣಗಳಲ್ಲಿ ಖುಲಾಸೆಗೊಳಿಸಲಾಗಿದೆ. ಇಲ್ಲವೇ ತನಿಖೆ ನಡೆಯುತ್ತಿದೆ.

ಕೆಲವು ಪ್ರಕರಣಗಳಲ್ಲಿ ಇಲಾಖೆಯ ಮೇಲಾಧಿಕಾರಿಗಳ ಮೇಲೆಯೂ ಆರೋಪ ಕೇಳಿ ಬಂದಿದೆ. ಆದರೆ, ಬಹುತೇಕ ಪ್ರಕರಣಗಳಲ್ಲಿ ಅವರು ಖುಲಾಸೆಯಾಗುತ್ತಾರೆ ಎಂಬುದು ಮಾಹಿತಿ ಹಕ್ಕು ಅರ್ಜಿಯೊಂದರಲ್ಲಿ ತಿಳಿದು ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...