alex Certify
ಕನ್ನಡ ದುನಿಯಾ       Mobile App
       

Kannada Duniya

ದೂರು ಹೇಳಿದ್ದೇ ತಪ್ಪಾಯ್ತು, ಡೈರೆಕ್ಟರ್ ಗೆ ಗುಂಡು ಹಾರಿಸಿದ ವಿದ್ಯಾರ್ಥಿ

student-shoots-school-director

ಮಧ್ಯಪ್ರದೇಶದ ಮೈಲ್ ಸ್ಟೋನ್ ಅಕಾಡೆಮಿ ಶಾಲೆಯಲ್ಲಿ ನಡೆದ ಘಟನೆ ಇದು. 9ನೇ ತರಗತಿ ವಿದ್ಯಾರ್ಥಿ ಕಲರ್ ಡ್ರೆಸ್ ಧರಿಸಿ ಬಂದಿದ್ದ, ಮನೆಗೆ ಹೋಗಿ ಸಮವಸ್ತ್ರ ಧರಿಸಿ ಬರುವಂತೆ ಶಿಕ್ಷಕರು ಸೂಚಿಸಿದ್ರು. ಅವನ ಪೋಷಕರಿಗೆ ಕರೆ ಮಾಡಿ ಶಾಲೆಯಲ್ಲಿ ತೋರುತ್ತಿದ್ದ ದುರ್ವರ್ತನೆ ಬಗ್ಗೆ ವಿವರಿಸಿದ್ರು. 2 ದಿನಗಳಿಂದ ಆತ ಶಾಲೆಗೂ ಬಂದಿರಲಿಲ್ಲ.

ಪೋಷಕರಿಗೆ ತನ್ನ ಬಗ್ಗೆ ದೂರು ಹೇಳಿದ್ರಿಂದ ಸಿಟ್ಟಿಗೆದ್ದ ವಿದ್ಯಾರ್ಥಿ ಯೂನಿಫಾರ್ಮ್ ಧರಿಸಿ ಮನೆಯಿಂದ ಬರುವಾಗ ಪಿಸ್ತೂಲ್ ಜೊತೆಗೆ ತಂದಿದ್ದ. ಶಾಲಾ ಆಡಳಿತ ಮಂಡಳಿ ಡೈರೆಕ್ಟರ್ ಅಮಿತ್ ಜೈನ್ ಅವರ ಕೊಠಡಿಗೆ ನುಗ್ಗಿ ಗುಂಡು ಹಾರಿಸಿದ್ದಾನೆ. ಗುಂಡು ಅವರ ಹೊಟ್ಟೆಗೆ ತಗುಲಿದ್ದು, ಇಂದೋರ್ ಗೆ ಕರೆದೊಯ್ಯಲಾಗಿದೆ. ಅಮಿತ್ ಜೈನ್ ಅವರ ಸ್ಥಿತಿ ಗಂಭೀರವಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ. ತಾನು ಮಾಡಿದ ಕೃತ್ಯ ಒಪ್ಪಿಕೊಂಡ ವಿದ್ಯಾರ್ಥಿ ಶಾಲೆಯಿಂದ ಓಡಿ ಹೋಗಿದ್ದಾನೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...