alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಯ್ ಫ್ರೆಂಡ್ ಗೆ ಬೈಕ್ ಕೊಡಿಸಲು ಈಕೆ ಮಾಡಿದ್ದೇನು?

bike bam

ಮುಂಬೈ: ಬಹುತೇಕ ಪ್ರಕರಣಗಳಲ್ಲಿ ಹುಡುಗರು ಉಡುಗೊರೆ ಕೊಡುತ್ತಾರೆ. ಆದರೆ, ಇಲ್ಲೊಬ್ಬಳು ತನ್ನ ಪ್ರಿಯಕರನಿಗೆ ಉಡುಗೊರೆಯಾಗಿ ಬೈಕ್ ಕೊಡಿಸಿದ್ದಾಳೆ. ಬೈಕ್ ಕೊಡಿಸಲು ಆಕೆ ಮಾಡಿದ ಖತರ್ನಾಕ್ ಕೆಲಸ ಏನೆಂಬುದನ್ನು ತಿಳಿಯಲು ಮುಂದೆ ಓದಿ.

ಗೆಳೆಯನಿಗೆ ಬೈಕ್ ಕೊಡಿಸಲು 15 ವರ್ಷದ ಬಾಲಕಿಯೊಬ್ಬಳು, ತನ್ನ ತಾಯಿಯ 1.75 ಲಕ್ಷ ರೂಪಾಯಿ ಮೌಲ್ಯದ ಒಡವೆಗಳನ್ನು ದೋಚಿದ ಘಟನೆ, ನವೀ ಮುಂಬೈನ ಬಜಾರ್ ಪೇಟ್ ಎಂಬಲ್ಲಿ ನಡೆದಿದೆ. ವೈದ್ಯರ ಮಗಳಾದ ಬಾಲಕಿ 20 ವರ್ಷ ವಯಸ್ಸಿನ ಕಾಲೇಜ್ ವಿದ್ಯಾರ್ಥಿಯೊಬ್ಬನನ್ನು ಪ್ರೀತಿಸಿದ್ದು, ಆತನಿಗೆ ಸ್ಪೋರ್ಟ್ಸ್ ಬೈಕ್ ಕೊಡಿಸುವ ಸಲುವಾಗಿ ಅಮ್ಮನ ಚಿನ್ನಾಭರಣ ಕಳವು ಮಾಡಿ, ಅವನ್ನು ಗೆಳೆಯನಿಗೆ ಕೊಟ್ಟಿದ್ದಾಳೆ.

ಆತ ತನ್ನ ಸ್ನೇಹಿತರೊಂದಿಗೆ ಸೇರಿ ಒಡವೆಯನ್ನು 85,000 ರೂ.ಗೆ ಮಾರಿ ಬೈಕ್ ಖರೀದಿಸಿದ್ದಾನೆ, ನಂತರ, ಬಾಲಕಿ ನಾಪತ್ತೆಯಾಗಿದ್ದಾಳೆ. ಕಳವು ಮತ್ತು ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ ಸಂದರ್ಭದಲ್ಲಿ ಈ ಕೃತ್ಯ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...