alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಒಂದು ವರ್ಷದ ಮಗು ಮೇಲೆ ಲೈಂಗಿಕ ದೌರ್ಜನ್ಯ

ಇಡೀ ನಾಗರಿಕ ಸಮುದಾಯ ತಲೆ ತಗ್ಗಿಸುವಂತಾ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 14 ತಿಂಗಳ ಹೆಣ್ಣು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ನಡೆದಿದೆ. 38 ವರ್ಷದ ಗಜರಾಜ್ ಸಿಂಗ್ ಬಿಲ್ ಎಂಬಾತನಿಂದ ಈ ಕೃತ್ಯ ನಡೆದಿದೆ.

ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ವ್ಯಕ್ತಿ ವರಸೆಯಲ್ಲಿ ಮಗುವಿಗೆ ತಾತನಾಗಬೇಕು. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಿಂದ 50 ಕಿಲೋಮೀಟರ್ ದೂರದಲ್ಲಿರುವ ವಿಧಿಶಾ ಜಿಲ್ಲೆಯಲ್ಲಿ ನಡೆದಿದೆ. ಲಠೇರಿ ಪೊಲೀಸ್ ಠಾಣೆಯ ಅಧಿಕಾರಿಗಳು ಹೇಳುವ ಪ್ರಕಾರ ಮನೆಯ ಮುಂದೆ ಅಟವಾಡುತ್ತಿದ್ದ ಮಗುವನ್ನು ಕರೆದೊಯ್ದ ಗಜರಾಜ್ ಸಿಂಗ್ ಸ್ವಲ್ಪ ಸಮಯದ ನಂತರ ಆತನ ಸೋದರನೊಂದಿಗೆ ವಾಪಸ್ಸು ಕಳಿಸಿದ.

ಮನೆಗೆ ಮರಳಿದ ಮಗು ನೋವಿನಿಂದ ಅಳುತ್ತಿರೋದು ತಾಯಿ ಗಮನಕ್ಕೆ ಬಂತು. ಮಗುವಿನ ಗುಪ್ತಾಂಗದಲ್ಲಿ ಕೆಲ ಗಾಯಗಳ ಗುರುತುಗಳಿರೋದು ತಾಯಿಯ ಗಮನಕ್ಕೆ ಬಂದಿತ್ತು. ಕೂಡಲೇ ಮಗುವನ್ನ ವೈದ್ಯರ ಬಳಿಗೆ ತಾಯಿ ಕರೆದುಕೊಂಡು ಹೋದರು. ಮಗುವಿನ ತಪಾಸಣೆ ನಡೆಸಿದ ವೈದ್ಯರು ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರೋದನ್ನ ಖಚಿತಪಡಿಸಿದ್ದಾರೆ.

ಘಟನೆಯ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದು, ಆತನ ವಿರುದ್ದ ಪೊಲೀಸರು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಮಧ್ಯ ಪ್ರದೇಶದದಲ್ಲಿ ಒಂದು ತಿಂಗಳ ಅವಧಿಯಲ್ಲಿ ಅಪ್ರಾಪ್ತರ ಮೇಲೆ ದಾಖಲಾಗುತ್ತಿರುವ ನಾಲ್ಕನೇ ಲೈಂಗಿಕ ದೌರ್ಜನ್ಯದ ಪ್ರಕರಣ ಇದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...