alex Certify
ಕನ್ನಡ ದುನಿಯಾ       Mobile App
       

Kannada Duniya

ಅಮಾನವೀಯ ಕೃತ್ಯ: 13 ವರ್ಷದ ಬಾಲಕನ ಬೆತ್ತಲೆ ಪೆರೇಡ್

ಆಘಾತಕಾರಿ ಹಾಗೂ ಅಮಾನವೀಯ ಘಟನೆಯೊಂದರಲ್ಲಿ 13 ವರ್ಷದ ಬಾಲಕನೊಬ್ಬನನ್ನು ಹಿಗ್ಗಾಮುಗ್ಗಾ ಥಳಿಸಿ ಆತನ ಮನೆಯಿಂದ ಗ್ರಾಮ ಪಂಚಾಯ್ತಿ ಕಚೇರಿ ತನಕ ಬೆತ್ತಲೆ ಮೆರವಣಿಗೆ ನಡೆಸಲಾಗಿದೆ. ಪರಿಶಿಷ್ಟ ಜಾತಿಗೆ ಸೇರಿದ ಈತ ಮೇಲ್ವರ್ಗದ ಹುಡುಗಿಗೆ ಚಾಕಲೇಟ್ ನೀಡಿದ ಎಂಬುದೇ ಇದಕ್ಕೆ ಕಾರಣ! ಈ ಹೇಯ ಕೃತ್ಯ ನಡೆದದ್ದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ.

ಆ ಹುಡುಗ ಮತ್ತು ಹುಡುಗಿಯ ಕುಟುಂಬಗಳು ಪರಸ್ಪರ ಮೊದಲಿನಿಂದಲೂ ಪರಿಚಿತವಾಗಿತ್ತು. ತಿಂಗಳ ಹಿಂದೆ ಬಾಲಕ ಶಾಲೆಯಿಂದ ಮರಳುವಾಗ ಆಕೆಗೆ ಚಾಕಲೇಟ್ ನೀಡಿದ್ದ. ಈ ವಿಷಯವನ್ನು ಬಾಲಕಿ ಮನೆಯಲ್ಲಿ ತಿಳಿಸಿದ ಬಳಿಕ ಎರಡು ಕುಟುಂಬಗಳ ಮಧ್ಯೆ ಉದ್ವಿಗ್ನ ಸ್ಥಿತಿ ಉಂಟಾಯಿತು ಎಂದು ಅಜಾರಾ ಠಾಣೆಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಗ್ರಾಮಕ್ಕೆ ಬಂದ ಬಾಲಕಿಯ ಮಾವ ಬಾಲಕನನ್ನು ಕೊಠಡಿಯೊಂದರಲ್ಲಿ ಕೂಡಿಹಾಕಿ ತನ್ನ ಗೆಳೆಯನೊಂದಿಗೆ ಮನಬದಂತೆ ಥಳಿಸಿದ್ದಾನೆ. ಬಳಿಕ ಬಾಲಕನ ಬಟ್ಟೆ ಬಿಚ್ಚಿ ಪರೇಡ್ ನಡೆಸಿದ್ದಾನೆ ಎಂದು ಹೇಳಲಾಗಿದೆ. ಇದೀಗ ಎರಡೂ ಸಮುದಾಯಗಳ ಸದಸ್ಯರ ಮಧ್ಯೆ ಮಾತುಕತೆ ನಡೆಸಿ ಗ್ರಾಮದಲ್ಲಿ ಪರಿಸ್ಥಿತಿಯನ್ನು ಶಾಂತಗೊಳಿಸಲಾಗಿದೆ. ಘಟನೆ ಸಂಬಂಧ ಇಬ್ಬರನ್ನು ಅಟ್ರಾಸಿಟಿ ಕಾಯ್ದೆಯಡಿ ಬಂಧಿಸಿಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...