alex Certify
ಕನ್ನಡ ದುನಿಯಾ       Mobile App
       

Kannada Duniya

ಅತ್ಯಾಚಾರದ ನಂತ್ರ 12ನೇ ತರಗತಿ ವಿದ್ಯಾರ್ಥಿನಿ ಕೊಲೆ

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಬಂದ ಮೇಲೂ ಪರಿಸ್ಥಿತಿ ಸುಧಾರಿಸಿಲ್ಲ. ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗ್ತಿದೆ. ಬುಲಂದಶಹರ್ ನಲ್ಲಿ 12ನೇ ತರಗತಿ ವಿದ್ಯಾರ್ಥಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು ನಂತ್ರ ಕೊಲೆ ಮಾಡಿದ್ದಾರೆ.

ಮಾಹಿತಿ ಪ್ರಕಾರ ಟ್ಯೂಷನ್ ಮುಗಿಸಿಕೊಂಡು ಮನೆಗೆ ಬರ್ತಿದ್ದ ವಿದ್ಯಾರ್ಥಿನಿ ಅಪಹರಿಸಿ ಹತ್ಯೆ ಮಾಡಲಾಗಿದೆ. ಗ್ರೇಟರ್ ನೋಯ್ಡಾ ಬಳಿಯ ದಾದ್ರಿ ಬಳಿ ಶವವನ್ನು ಎಸೆದು ಹೋಗಿದ್ದಾರೆ ಆರೋಪಿಗಳು. ಸಾಮೂಹಿಕ ಅತ್ಯಾಚಾರವೆಸಗಿ ನಂತ್ರ ಹತ್ಯೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆರೋಪಿಗಳ ಬಂಧನವಾಗುವವರೆಗೂ ಅಂತ್ಯಸಂಸ್ಕಾರ ನಡೆಸುವುದಿಲ್ಲವೆಂದು ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ಕುಟುಂಬಸ್ಥರ ಪ್ರಕಾರ ಆಟೋವೊಂದು ವಿದ್ಯಾರ್ಥಿನಿ ಸೈಕಲ್ ಹಿಂಬಾಲಿಸಿದೆಯಂತೆ. ಸೈಕಲ್ ನಲ್ಲಿ ಟ್ಯೂಷನ್ ಗೆ ಹೋಗ್ತಿದ್ದ ವಿದ್ಯಾರ್ಥಿನಿಯನ್ನು ಸಮಯ ನೋಡಿ ಆಟೋದಲ್ಲಿದ್ದ ಯುವಕರು ಅಪಹರಿಸಿದ್ದಾರೆ. ಈ ಬಗ್ಗೆ 100ಕ್ಕೆ ಕರೆ ಮಾಡಿ ದೂರು ನೀಡಲಾಗಿದೆ. ಆದ್ರೆ ಘಟನೆ ನಡೆದು ಅರ್ಧ ಗಂಟೆಯಾದ್ರೂ ಪೊಲೀಸರು ಸ್ಥಳಕ್ಕೆ ಬಂದಿರಲಿಲ್ಲವಂತೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...