alex Certify
ಕನ್ನಡ ದುನಿಯಾ       Mobile App
       

Kannada Duniya

ಆಕಸ್ಮಿಕವಾಗಿ ಹಾರಿದ ಗುಂಡಿಗೆ ಬಾಲಕ ಬಲಿ

ಅಕ್ರಮ ಕಂಟ್ರಿ ಮೇಡ್ ಪಿಸ್ತೂಲ್ ಗಳಿಂದ ದೊಡ್ಡವರ ಜೀವನ ಮಾತ್ರವಲ್ಲ. ಮಕ್ಕಳ ಬದುಕು ಕೂಡ ಬರಿದಾಗ್ತಿದೆ ಅನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ. ಮಹಾರಾಷ್ಟ್ರದ ಅಹ್ಮದ್ ನಗರ್ ಜಿಲ್ಲೆಯಲ್ಲಿ ನಾಡ ಪಿಸ್ತೂಲಿನಿಂದ ಆಕಸ್ಮಿಕವಾಗಿ ಹಾರಿದ ಗುಂಡಿಗೆ 12 ವರ್ಷದ ಬಾಲಕನೊಬ್ಬ ಬಲಿಯಾಗಿದ್ದಾನೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆಯಲ್ಲಿ ಪ್ರಾಣ ಕಳೆದುಕೊಂಡ ಬಾಲಕನನ್ನು ಆದಿತ್ಯ ಭೈರವನಾಥ್ ಮೋರೆ ಅಂತ ಗುರುತಿಸಲಾಗಿದೆ. ತನ್ನ ಅಂಕಲ್ ನ ನಾಡ ಪಿಸ್ತೂಲನ್ನು ಕೈನಲ್ಲಿ ಹಿಡಿದುಕೊಂಡಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಅದರಿಂದ ಬುಲೆಟ್ ಸಿಡಿದಿದೆ. ಆ ಬುಲೆಟ್ ಆದಿತ್ಯನ ಎದೆಯ ಭಾಗವನ್ನು ಹೊಕ್ಕಿದ್ದರಿಂದಾಗಿ ಆದಿತ್ಯ ಮೃತಪಟ್ಟಿದ್ದಾನೆ.

ಈ ಸಂಬಂಧ ಪಿಸ್ತೂಲ್ ಖರೀದಿ ಮಾಡಿದ್ದ ಆದಿತ್ಯನಾಥ್ ನ ಚಿಕ್ಕಪ್ಪ ನವನಾಥ್ ಮೋರೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಷ್ಟೇ ಅಲ್ಲ ಈ ಪಿಸ್ತೂಲ್ ನ್ನ ಹೇಗೆ ಖರೀದಿ ಮಾಡಿದ್ದು, ಅದರ ಮೂಲ ಎಲ್ಲಿಯದು ಅನ್ನೋದನ್ನ ಪತ್ತೆ ಮಾಡುವ ಸಂಬಂಧ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...