alex Certify
ಕನ್ನಡ ದುನಿಯಾ       Mobile App
       

Kannada Duniya

ಓದು, ಆಟದ ಸಮಯದಲ್ಲಿ ವೇಶ್ಯಾವಾಟಿಕೆ ಅಡ್ಡೆಯಲ್ಲಿ ಹೈರಾಣವಾದ್ಲು ಬಾಲಕಿ

ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ 12 ವರ್ಷದ ಬಾಲಕಿ ಬದುಕು ನರಕವಾಗಿದೆ. ಬಾಲಕಿಯನ್ನು ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳಿದ ದೊಡ್ಡ ಜಾಲವನ್ನು ಈಗ್ಲೂ ಪೊಲೀಸರು ಹುಡುಕುತ್ತಿದ್ದಾರೆ.

ಸಂದೀಪ್ ಎಂಬಾತ ಲಕ್ಷ್ಮೀ ನಗರದಿಂದ ಬಾಲಕಿಯನ್ನು 2009ರಲ್ಲಿ ಅಪಹರಿಸಿದ್ದ. ವೇಶ್ಯಾವಾಟಿಕೆ ನಡೆಸುವ ದಲ್ಲಾಳಿಗೆ ಮೊದಲು ಈಕೆಯನ್ನು ಮಾರಾಟ ಮಾಡಿದ್ದ. ಬಾಲಕಿ ಮೇಲೆ ಆಗ್ಲೇ 5-6 ಬಾರಿ ಅತ್ಯಾಚಾರ ನಡೆದಿತ್ತು. ನಂತ್ರ ಎರಡನೇ ಮತ್ತು 3ನೇ ದಲ್ಲಾಳಿ ಬಳಿ ಹೋದ ಬಾಲಕಿಗೆ ನಶೆಯ ಔಷಧಿ ಕುಡಿಸಿ ವೇಶ್ಯಾವಾಟಿಕೆಗೆ ತಳ್ಳಲಾಗ್ತಾಯಿತ್ತು.

ನಂತ್ರ ಬಾಲಕಿ ಕುಖ್ಯಾತ ಹೈಟೆಕ್ ವೇಶ್ಯಾವಾಟಿಕೆ ನಡೆಸುತ್ತಿದ್ದ ಕ್ರಿಮಿನಲ್ ಸೋನು ಪಂಜಾಬನ್ ಕೈ ಸೇರಿದ್ಲು. ನೆಟ್ ಮೂಲಕ ಗ್ರಾಹಕರನ್ನು ಸಂಪರ್ಕಿಸುತ್ತಿದ್ದ ಸೋನು ತನ್ನ ಗ್ಯಾಂಗ್ ಜೊತೆ ಹುಡುಗಿಯನ್ನು ಅಲ್ಲಿಗೆ ಕಳುಹಿಸುತ್ತಿದ್ದಳು. ಹುಡುಗಿ ಓಡಿ ಹೋಗದಿರಲಿ ಎನ್ನುವ ಕಾರಣಕ್ಕೆ ಸದಾ ನಶೆ ಔಷಧಿ ನೀಡಲಾಗ್ತಾಯಿತ್ತು.

2011ರಲ್ಲಿ ಸೋನು ಆಕೆಯನ್ನು ಲಕ್ನೋ ದಲ್ಲಾಳಿಗೆ ಮಾರಾಟ ಮಾಡಿದ್ದಳು. ನಂತ್ರ ದೆಹಲಿ ದಲ್ಲಾಳಿಗೆ ಮತ್ತೆ ಮಾರಾಟ ಮಾಡಲಾಯ್ತು. ಅಲ್ಲಿ ಇಲ್ಲಿ ನಿರಂತರ ಹಿಂಸೆ ಅನುಭವಿಸಿದ ಹುಡುಗಿ 2014ರಲ್ಲಿ ಅಲ್ಲಿಂದ ತಪ್ಪಿಸಿಕೊಂಡಿದ್ದಳು. ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಳು.

ಆದ್ರೆ ಕೆಲವೇ ಕ್ಷಣಗಳಲ್ಲಿ ಹುಡುಗಿ ಅಲ್ಲಿಂದ ಮಾಯವಾಗಿದ್ದಳು. ಆಕೆ ಎಲ್ಲಿದ್ದಾಳೆಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮೂರು ವರ್ಷ ತೆಗೆದುಕೊಂಡ್ರು. ಕೊನೆಗೂ 2017ರಲ್ಲಿ ಸಿಕ್ಕ ಹುಡುಗಿಗೆ ಬುದ್ದಿ ಹೇಳಿ ಸೋನು ಹಾಗೂ ಆಕೆ ತಂಡವನ್ನು ಪತ್ತೆ ಹಚ್ಚಿದ್ರು. 2017ರಲ್ಲಿ ಸೋನು ತಂಡವನ್ನು ಬಂಧಿಸಲಾಗಿದೆ. ಇನ್ನೂ ಕೆಲ ದಲ್ಲಾಳಿಗಳು ತಪ್ಪಿಸಿಕೊಂಡಿದ್ದು ಅವ್ರ ಹುಡುಕಾಟ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...