alex Certify
ಕನ್ನಡ ದುನಿಯಾ       Mobile App
       

Kannada Duniya

ರಾಷ್ಟ್ರಗೀತೆಗೆ ಗೌರವ ಸೂಚಿಸದ 11 ಮಂದಿ ಅರೆಸ್ಟ್

national-anthem-cinema

ಕೇರಳದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಾಷ್ಟ್ರಗೀತೆಗೆ ಗೌರವ ಸೂಚಿಸದ 11 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಇಬ್ಬರು ಮಹಿಳೆಯರು ಕೂಡ ಇದ್ದಾರೆ. ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ಸಂದರ್ಭದಲ್ಲಿ ಎಲ್ಲರೂ ಎದ್ದು ನಿಂತು ಗೌರವ ಸೂಚಿಸಬೇಕೆಂಬ ನಿಯಮವಿದೆ, ಆದ್ರೆ ಅವರು ಕುಳಿತೇ ಇದ್ರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿ ಬಳಿಕ ಬಿಡುಗಡೆ ಮಾಡಲಾಯ್ತು.

ಐಪಿಸಿ ಸೆಕ್ಷನ್ 188ರ ಅಡಿಯಲ್ಲಿ 11 ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಿಶಾಗಾಂಧಿ ಆಡಿಟೋರಿಯಂನಲ್ಲಿ ಅರೇಬಿಕ್ ಚಿತ್ರ ‘ಕ್ಲಾಶ್’ ಪ್ರದರ್ಶನವಿತ್ತು. ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಪ್ರಸಾರ ಮಾಡಲಾಯ್ತು.

ಆಗ ಮಹಿಳೆ ಸೇರಿದಂತೆ 6 ಮಂದಿ ಎದ್ದು ನಿಂತು ಗೌರವ ಸೂಚಿಸಲಿಲ್ಲ. 8 ಗಂಟೆ ಶೋನಲ್ಲಿ ‘ಡೆತ್ ಆಫ್ ಸರಜೆವೋ’ ಚಿತ್ರ ಪ್ರದರ್ಶನವಿತ್ತು. ಆಗ ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಸೂಚಿಸಿದ ಐವರನ್ನು ಅರೆಸ್ಟ್ ಮಾಡಲಾಗಿದೆ. ತಾವು ಸೀಟು ಹುಡುಕಿಕೊಳ್ಳುವ ಆತುರದಲ್ಲಿದ್ದುದರಿಂದ ಎದ್ದು ನಿಂತಿಲ್ಲ ಅಷ್ಟೆ. ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆಗೆ ಅವಮಾನಿಸಿಲ್ಲ ಅಂತಾ ಬಂಧಿತ ಪ್ರೇಕ್ಷಕರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...