alex Certify
ಕನ್ನಡ ದುನಿಯಾ       Mobile App
       

Kannada Duniya

ಕುಡುಕನಿಂದ ಅತ್ಯಾಚಾರಕ್ಕೊಳಗಾಗಿದ್ದ 100 ವರ್ಷದ ವೃದ್ಧೆ ಸಾವು

ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಕುಡುಕನಿಂದ ಅತ್ಯಾಚಾರಕ್ಕೊಳಗಾಗಿದ್ದ 100 ವರ್ಷದ ವೃದ್ಧೆ ಮೃತಪಟ್ಟಿದ್ದಾಳೆ. ಮೀರತ್ ಜಿಲ್ಲೆಯ ಜಾನಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಈ ನೀಚ ಕೃತ್ಯ ನಡೆದಿದೆ. ಅನಾರೋಗ್ಯಪೀಡಿತಳಾಗಿದ್ದ ವೃದ್ಧೆ ತನ್ನ ಸಹೋದರನೊಂದಿಗೆ ವಾಸಿಸುತ್ತಿದ್ಲು.

ಕಂಠಪೂರ್ತಿ ಕುಡಿದಿದ್ದ ಅಂಕಿತ್ ಪೂನಿಯಾ ಎಂಬ ಯುವಕ 100 ವರ್ಷದ ವೃದ್ಧೆ ಮೇಲೆ ಎರಗಿದ್ದಾನೆ. ಅತ್ಯಾಚಾರ ಎಸಗಿದ್ದಾನೆ. ಅಜ್ಜಿ ಹೆದರಿ ಕೂಗಿಕೊಂಡಿದ್ದಾಳೆ. ಜೋರಾಗಿ ಅಳಲಾರಂಭಿಸಿದ್ದಾಳೆ. ಅದನ್ನು ಕೇಳಿದ ಆಕೆಯ ಸಹೋದರ ಓಡಿ ಬಂದ.

ನೆರೆಹೊರೆಯವರೆಲ್ಲ ಸೇರಿ ಕಾಮುಕ ಅಂಕಿತ್ ಪೂನಿಯಾನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದ್ರೆ ಯುವಕ ಮಾತ್ರ ತಾನು ನಿರಪರಾಧಿ, ಅಜ್ಜಿ ಮೇಲೆ ಅತ್ಯಾಚಾರ ಎಸಗಿಲ್ಲ ಅಂತಾ ಹೇಳ್ತಿದ್ದಾನೆ. ಅತ್ಯಾಚಾರದಿಂದ ಬಳಲಿದ್ದ ವೃದ್ಧೆ ಮೃತಪಟ್ಟಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...