alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಲಕಿ ಸಾವಿಗೆ ಕಾರಣವಾಯ್ತು ಜಾಯಿಂಟ್ ವೀಲ್

ಆಂಧ್ರಪ್ರದೇಶದ ಆನಂದಪುರದಲ್ಲಿ ದುರ್ಘಟನೆಯೊಂದು ನಡೆದಿದೆ. ಜಾಯಿಂಟ್ ವೀಲ್ ಮುರಿದು 10 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಜಾಯಿಂಟ್ ವೀಲ್ ಕಟ್ ಆಗ್ತಿದ್ದಂತೆ ಅದ್ರಲ್ಲಿದ್ದ ಬಾಲಕಿ ಕೆಳಗೆ ಬಿದ್ದಿದ್ದಾಳೆ. ಘಟನೆ ಜೂನಿಯರ್ ಕಾಲೇಜ್ ಮೈದಾನದಲ್ಲಿ ನಡೆದಿದೆ.

ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಅನೇಕರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಾಗಿದೆ. ಹೃದಯ ಕಲಕುವ ಈ ಘಟನೆ ಕ್ಯಾಮರಾದಲ್ಲಿ ದಾಖಲಾಗಿದೆ. ಬೋಲ್ಟ್ ಸಡಿಲವಾದ ಕಾರಣ ಜಾಯಿಂಟ್ ವೀಲ್ ಕೆಳಗೆ ಬಿದ್ದಿದೆ. ಅದ್ರ ಮೇಲಿದ್ದ ಎಲ್ಲರೂ ಕೆಳಗೆ ಬಿದ್ದಿದ್ದಾರೆ. ಮೃತ ಬಾಲಕಿ ಹೆಸರು ಅಮೃತಾ ಎನ್ನಲಾಗಿದೆ.

ಮಾಧ್ಯಮಗಳ ವರದಿ ಪ್ರಕಾರ ಬೋಲ್ಟ್ ಸಡಿಲವಾದ ಸಂಗತಿಯನ್ನು ಆಪರೇಟರ್ ಗೆ ಕೆಲವರು ಹೇಳಿದ್ದರಂತೆ. ಆದ್ರೆ ಆತ ನಿರ್ಲಕ್ಷ್ಯ ಮಾಡಿದ್ದ ಎನ್ನಲಾಗಿದೆ. ಘಟನೆ ನಂತ್ರ ಆಪರೇಟರ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ನಂತ್ರ ಪೊಲೀಸರಿಗೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...