alex Certify
ಕನ್ನಡ ದುನಿಯಾ       Mobile App
       

Kannada Duniya

ಸಹೋದರಿಗೆ ಮದ್ಯ ಕುಡಿಸಿ ದುಷ್ಕೃತ್ಯಕ್ಕೆ ಪ್ರಯತ್ನಿಸಿದ ಪಾಪಿ ಸಹೋದರ

ರಾಷ್ಟ್ರ ರಾಜಧಾನಿಯಲ್ಲಿ ತಲೆ ತಗ್ಗಿಸುವ ಘಟನೆಯೊಂದು ನಡೆದಿದೆ. ಸಹೋದರನೊಬ್ಬ ತನ್ನ ಸಹೋದರಿಗೆ ಆಲ್ಕೋಹಾಲ್ ಕುಡಿಸಿ ಕಿರುಕುಳ ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆ ಕಾರ್ಟರ್ಪುರಿ ಗ್ರಾಮದಲ್ಲಿ ನಡೆದಿದೆ. 10 ವರ್ಷದ ಬಾಲಕಿ ಸಹೋದರನ ಜೊತೆ ಮನೆಯಲ್ಲಿದ್ದಳು. ಈ ವೇಳೆ ಆಕೆ ಕೋಣೆಗೆ ಬಂದ 22 ವರ್ಷದ ದೊಡ್ಡಣ್ಣ ಒತ್ತಾಯ ಪೂರ್ವಕವಾಗಿ ಮದ್ಯಪಾನ ಮಾಡಿಸಿದ್ದಾನೆ. ನಂತ್ರ ಖಾಸಗಿ ಅಂಗವನ್ನು ಸ್ಪರ್ಶಿಸಿದ್ದಾನಂತೆ. ಆಕೆ ಜೊತೆ ಕೆಟ್ಟದಾಗಿ ನಡೆದುಕೊಳ್ಳಲು ಪ್ರಯತ್ನಿಸಿದ್ದನಂತೆ.

ಬಾಲಕಿ ಕೂಗಿಕೊಳ್ತಿದ್ದಂತೆ ಪಕ್ಕದ ಮನೆಯವರು ಮನೆಗೆ ಬಂದಿದ್ದಾರೆ. ತಕ್ಷಣ ಆರೋಪಿ ಅಲ್ಲಿಂದ ನಾಪತ್ತೆಯಾಗಿದ್ದಾನೆ. ಪಕ್ಕದ ಮನೆಯಾಕೆ ಬಾಲಕಿ ತಾಯಿಗೆ ವಿಷ್ಯ ತಿಳಿಸಿದ್ದಾಳೆ. ಬಾಲಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಳು ಎನ್ನಲಾಗಿದೆ. ಮಂಗಳವಾರ ಮನೆಗೆ ಬಂದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಹಾಗೂ ಆರೋಪಿ ತಂದೆ ಇಬ್ಬರೂ ರಿಕ್ಷಾ ಚಲಾಯಿಸುತ್ತಾರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...