alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲು ಕುಡಿಯುವ ಮೊದಲು ಎಚ್ಚರವಿರಲಿ

milk

ಎಲ್ಲ ರೋಗಕ್ಕೂ ಹಾಲು ಮದ್ದು ಎನ್ನುತ್ತಾರೆ. ಪ್ರತಿದಿನ ಹಾಲು ಕುಡಿಯಿರಿ ಅಂತ ವೈದ್ಯರು ಸಲಹೆ ನೀಡ್ತಾರೆ. ಆದ್ರೆ ಅಮೃತ ಎಂದುಕೊಂಡಿರುವ ಹಾಲೇ ವಿಷವಾದ್ರೆ ಏನು ಗತಿ. ಗುಜರಾತ್ ನ ಪೋರಬಂದರ್ ಜನ ಅಮೃತ ಎಂದುಕೊಂಡಿದ್ದ ಹಾಲು ಈಗ ವಿಷವಾಗಿದೆ. ಅಲ್ಲಿನ ರೈಲ್ವೆ ಕಾಲೋನಿಯಲ್ಲಿ ಹಾಲಿಗೆ ಕಲುಷಿತ ವಸ್ತುವೊಂದನ್ನು ಬೆರೆಸಲಾಗಿದೆ ಎನ್ನುವ ಆತಂಕ ಜನರಲ್ಲಿ ಮನೆ ಮಾಡಿದೆ.

ಕಾಲೋನಿಯಲ್ಲಿ ಹಾಲು ಕಾಯಿಸ್ತಿದ್ದಂತೆ ಹಾಲು ರಬ್ಬರ್ ರೂಪ ಪಡೆದಿದೆ. ಇದನ್ನು ನೋಡಿದ ಜನರು ಹೆದರಿದ್ದಾರೆ. ಹಾಲು ಕುಡಿಯುವುದನ್ನೇ ಬಿಟ್ಟು ಬಿಟ್ಟಿದ್ದಾರೆ. ಎಂದಿನಂತೆ ಅಂದೂ ಕೂಡ ಕಾಲೋನಿಯ ಜನರು ಹಾಲು ಮಾರುವವನ ಬಳಿ ಹಾಲು ಪಡೆದಿದ್ದರು. ಆದ್ರೆ ಹಾಲು ಕಾಯಿಸುತ್ತಿದ್ದಂತೆ ಹಾಲಿನ ರೂಪ ಬದಲಾಗಿದೆ.

ಎರಡು ದಿನಗಳ ಹಿಂದೆ ಕಾಲೋನಿಯ ಒಂದು ಕುಟುಂಬದ ಎಲ್ಲ ಜನರೂ ಅನಾರೋಗ್ಯಕ್ಕೊಳಗಾಗಿದ್ದರು. ಇದಕ್ಕೆ ಕಾರಣ ತಿಳಿದುಬಂದಿರಲಿಲ್ಲ. ಆದ್ರೀಗ ಕಲುಷಿತ ಹಾಲು ಸೇವನೆಯೇ ಇದಕ್ಕೆ ಕಾರಣ ಎನ್ನಲಾಗ್ತಾ ಇದೆ. ಏತನ್ಮಧ್ಯೆ ಫೋರಬಂದರ್ ಪುರಸಭೆ ಇದರ ಪರಿಶೀಲನೆ ನಡೆಸ್ತಾ ಇದೆ. ಹಾಲನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...