alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸ್ ಅಪ್ ನಲ್ಲಿ ಕಾನ್ಸ್ಟೇಬಲ್ ಗೆ ಸಂದೇಶ ಕಳಸ್ತಿದ್ಲು ಪತ್ನಿ….ಬೇಸತ್ತ ಪತಿ..!

delhi_1497428147_749x421

ದೆಹಲಿಯ ಗೀತಾ ಕಾಲೋನಿಯಲ್ಲಿ ಪತ್ನಿ ಅಕ್ರಮ ಸಂಬಂಧಕ್ಕೆ ಬೇಸತ್ತು ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ವ್ಯಕ್ತಿ ಪೊಲೀಸ್ ಕಾನ್ಸ್ಟೇಬಲ್ ಬೆದರಿಕೆಗೆ ಹೆದರಿ ಮಕ್ಕಳ ಮುಂದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಾಹಿತಿ ಪ್ರಕಾರ ಗೀತಾ ಕಾಲೋನಿ ಬಳಿ ಹಸೀನ್ ಎಂಬಾತ ತನ್ನ ಕುಟುಂಬಸ್ಥರ ಜೊತೆ ವಾಸವಾಗಿದ್ದ. 4 ವರ್ಷಗಳ ಹಿಂದೆ ಆತನಿಗೆ ಮದುವೆಯಾಗಿತ್ತು. ಇಬ್ಬರು ಮಕ್ಕಳಿರುವ ಹಸೀನ್ ಪತ್ನಿ ಗೀತಾ ಕಾಲೋನಿಯ ಕಾನ್ಸ್ಟೇಬಲ್ ಪ್ರದೀಪ್ ಎಂಬಾತನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಪ್ರದೀಪ್ ಆಗಾಗ ಹಸೀನ್ ಮನೆಗೆ ಬರ್ತಾ ಇದ್ದನಂತೆ. ಈ ಬಗ್ಗೆ ಹಸೀನ್ ಸಾಕಷ್ಟು ಬಾರಿ ಪತ್ನಿಗೆ ಬುದ್ದಿವಾದ ಹೇಳಿದ್ದಾನೆ.

ಮಂಗಳವಾರ ಪತಿ-ಪತ್ನಿ ನಡುವೆ ಗಲಾಟೆ ನಡೆದಿದೆ. ಪತ್ನಿ ಪ್ರದೀಪ್ ಗೆ ಕಳುಹಿಸಿದ್ದ ವಾಟ್ಸ್ ಅಪ್ ಸಂದೇಶವನ್ನು ಹಸೀನ್ ಮನೆಯವರಿಗೆ ತೋರಿಸಿದ್ದಾನೆ. ಆದ್ರೆ ಇದನ್ನು ಪತ್ನಿ ಅಲ್ಲಗಳೆದಿದ್ದಾಳೆ. ಹಾಗಾದ್ರೆ ಪ್ರದೀಪ್ ವಿರುದ್ಧ ದೂರು ನೀಡು ಬಾ ಎಂದು ಪೊಲೀಸ್ ಠಾಣೆಗೆ ಪತ್ನಿಯನ್ನು ಕರೆದೊಯ್ದಿದ್ದಾನೆ ಹಸೀನ್. ಪೊಲೀಸ್ ಠಾಣೆಯಲ್ಲಿದ್ದ ಪ್ರದೀಪ್, ಹಸೀನ್ ಗೆ ಬೈದು ಠಾಣೆಯಿಂದ ಹೊರ ಹಾಕಿದ್ದಾನೆ. ಪೊಲೀಸ್ ವರ್ತನೆಗೆ ಬೇಸತ್ತ ಹಸೀನ್ ಮಕ್ಕಳೆದುರೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದ್ರೆ ಪ್ರದೀಪ್ ವಿರುದ್ಧ ತನಿಖೆ ನಡೆಸ್ತಾರಾ ಎಂಬ ಪ್ರಶ್ನೆ ಸದ್ಯ ಎಲ್ಲರನ್ನು ಕಾಡ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...