alex Certify
ಕನ್ನಡ ದುನಿಯಾ       Mobile App
       

Kannada Duniya

ಮರ್ಯಾದಾಗೇಡು ಹತ್ಯೆಗೆ ಯುವತಿ ಬಲಿ

ಮಗಳು ಪಕ್ಕದ ಮನೆಯ ಯುವಕನನ್ನು ಪ್ರೀತಿಸುತ್ತಿದ್ದಾಳೆಂಬ ವಿಚಾರಕ್ಕೆ ತಂದೆಯೇ ಮಗಳನ್ನು ಹತ್ಯೆ ಮಾಡಿದ ಘಟನೆ ಆಗ್ರಾದ ಫಿರೋಜಾಬಾದ್ ಜಿಲ್ಲೆಯ ಸಲೆಂಪುರ್ ಖುಟಿಯಾನಾ ಗ್ರಾಮದಲ್ಲಿ ನಡೆದಿದೆ.

ಹರಿವಂಶ್ ಕುಮಾರ್ ಎಂಬಾತ ಹತ್ಯೆ ಮಾಡಿದ ವ್ಯಕ್ತಿ. 22 ವರ್ಷದ ಪೂಜಾ ಸಿಂಗ್ ಕೊಲೆಯಾದ ಯುವತಿ. ಶನಿವಾರ ರಾತ್ರಿ ಪೂಜಾ ತನ್ನ ಪ್ರಿಯಕರನೊಂದಿಗೆ ಮನೆ ಬಳಿ ಮಾತನಾಡುವುದನ್ನು ಕಂಡ ತಂದೆ ಹರಿವಂಶ್ ಸಿಟ್ಟಿಗೆದ್ದಿದ್ದಾನೆ. ಈ ವೇಳೆ ಮಗಳಿಗೆ ವಿದ್ಯುತ್ ಶಾಕ್ ನೀಡಿ, ಚಾಕುವಿನಿಂದ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ.

ಈ ವಿಚಾರವನ್ನು ಪೂಜಾ ಸಹೋದರ ಯೋಗೇಶ್ ಪೊಲೀಸರಿಗೆ ತಿಳಿಸಿದ್ದಾನೆ. ಘಟನೆ ಬಗ್ಗೆ ತಿಳಿದ ಪೊಲೀಸರು ಹರಿವಂಶ್ ಕುಮಾರ್ ನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...