alex Certify
ಕನ್ನಡ ದುನಿಯಾ       Mobile App
       

Kannada Duniya

ಮಗನನ್ನೇ ಕೊಂದ ತಂದೆ-ತಾಯಿ, ಕಾರಣ ಗೊತ್ತಾ…?

ಅದೆಷ್ಟೋ ಜನ ಕುಡಿತಕ್ಕೆ ದಾಸರಾಗಿ ಬಿಡುತ್ತಾರೆ. ಈ ಕುಡಿತದ ಚಟದಿಂದ ಮಾಡಬಾರದ ಕೆಲಸವನ್ನೆಲ್ಲಾ ಮಾಡುತ್ತಾರೆ. ಕೆಲವೊಮ್ಮೆ ಮಕ್ಕಳ ಈ ದುಶ್ಚಟಕ್ಕೆ ತಂದೆ-ತಾಯಿ ಬೇಸತ್ತು ಹೋಗುತ್ತಾರೆ. ಆದರೆ ಹೈದರಾಬಾದ್‌ನಲ್ಲಿ ಮಗನ ಕುಡಿತದಿಂದ ಬೇಸತ್ತ ತಂದೆ-ತಾಯಿ ಮಗನನ್ನೇ ಬಾರದ ಲೋಕಕ್ಕೆ ಕಳುಹಿಸಿದ್ದಾರೆ.

ಹೌದು, ಹೈದರಾಬಾದ್‌ನ ವಾರಂಗಲ್ ಜಿಲ್ಲೆಯ ಮುಸ್ತಾಯಲಪಳ್ಳಿ ಗ್ರಾಮದವರಾದ ಕೆ.ಪ್ರಭಾಕರ್, ವಿಮಲಾ ಎಂಬ ದಂಪತಿ ತಮ್ಮ ಮಗ ಕೆ. ಮಹೇಶ ಚಂದ್ರನನ್ನು ಕಂಬಕ್ಕೆ ಕಟ್ಟಿ ಹಾಕಿ ಪೆಟ್ರೋಲ್ ಸುರಿದು ಜೀವಂತವಾಗಿ ಸುಟ್ಟಿದ್ದಾರೆ.

ಘಟನೆ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಮಹೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಈ ದಂಪತಿಯ ವಿರುದ್ದ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ ಎನ್ನಲಾಗಿದೆ.

ಪ್ರತಿ ನಿತ್ಯ ಮಹೇಶ್ ಕುಡಿದು ಮನೆಗೆ ಬರುವುದಲ್ಲದೆ ಹಣಕ್ಕಾಗಿ ತಂದೆ-ತಾಯಿಯನ್ನು ಹೊಡೆಯುತ್ತಿದ್ದನಂತೆ. ಇತ್ತೀಚೆಗೆ ಮಹೇಶ್ ಹೆಂಡತಿ ಕೂಡ ಕಿರುಕುಳಕ್ಕೆ ಬೇಸತ್ತು ಮನೆ ಬಿಟ್ಟು ಹೋಗಿದ್ದರಂತೆ. ಇವನ ಈ ಕಿರುಕುಳಕ್ಕೆ ಬೇಸತ್ತ ತಂದೆ-ತಾಯಿ ಈ ರೀತಿ ಮಾಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...