alex Certify
ಕನ್ನಡ ದುನಿಯಾ       Mobile App
       

Kannada Duniya

ಪತಿ ಸಾವಿನ ನಂತರ ಪುತ್ರಿಯನ್ನು ಹತೈಗೈದು ಸಾವಿಗೆ ಶರಣಾದ ಪತ್ನಿ

ಭರತ್ ಸುಬ್ರಮಣ್ಯಂ ಇತ್ತೀಚೆಗೆ ರೈಲಿನ ಮುಂದೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಪತಿಯ ಆತ್ಮಹತ್ಯೆ ವಿಚಾರ ತಿಳಿದು ಭರತ್ ಪತ್ನಿ ತನ್ನ ಐದು ವರ್ಷದ ಮಗಳನ್ನು ಕೊಂದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಭರತ್ ಸುಬ್ರಮಣ್ಯಂ ಪತ್ನಿ ಶಿವರಂಜಿನಿ ಹಾಗೂ ಐದು ವರ್ಷದ ಮಗಳು ಜೈಶ್ರೀತಾ ಮೃತಪಟ್ಟ ದುರ್ದೈವಿಗಳು.

ಈ ಕುಟುಂಬ ನೋಯ್ಡಾದಲ್ಲಿ ವಾಸವಿತ್ತು. ಇನ್ನು ಭರತ್ ಟೀ ಅಂಗಡಿಯೊಂದರಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರಂತೆ. ಆದರೆ ಭರತ್ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

ಇನ್ನು ಈ ತಾಯಿ-ಮಗಳ ಶವ ಫ್ಲಾಟ್‌ ನಲ್ಲಿ ಪತ್ತೆಯಾಗಿದೆ. ಪತಿಯ ಸಾವಿನಿಂದ ಬೇಸರಗೊಂಡ ಶಿವರಂಜಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...