alex Certify
ಕನ್ನಡ ದುನಿಯಾ       Mobile App
       

Kannada Duniya

ದಿಬ್ಬಣ ವಾಪಸ್ ಹೊರಡುವಾಗ ಗೊತ್ತಾಯ್ತು ವರನ ಅಸಲಿಯತ್ತು

download

ಬಿಹಾರದಲ್ಲಿ ಮಧುಮಗ ಮೆರವಣಿಗೆಯಲ್ಲಿ ವಧುವಿನ ಮನೆ ತಲುಪಿದ್ದಾನೆ. ಮದುವೆ ಅದ್ಧೂರಿಯಾಗಿ ನಡೆದಿದೆ. ಆದ್ರೆ ಗಂಡನ ಜೊತೆ ಮನೆಗೆ ಹೋಗಲು ಮಾತ್ರ ವಧು ನಿರಾಕರಿಸಿದ್ದಾಳೆ. ವರ ದಡ್ಡ ಎನ್ನುವುದೇ ಕಾರಣವಾಗಿದ್ದು, ಪ್ರಕರಣ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.

ವೈಶಾಲಿಯ ಬಳಿಯ ಹಳ್ಳಿಯೊಂದರಲ್ಲಿ ಶ್ರವಣ್ ಚೌಧರಿ ಎಂಬಾತನ ಮದುವೆ ಅಶೋಕ್ ಚೌಧರಿ ಎಂಬುವವರ ಮಗಳ ಜೊತೆ ನಿಶ್ಚಯವಾಗಿತ್ತು. ದಿಬ್ಬಣ ತೆಗೆದುಕೊಂಡು ವರನ ಕಡೆಯವರು ಮದುವೆ ಮನೆ ತಲುಪಿದ್ದಾರೆ. ಮದುವೆ ಕೂಡ ಸುಸೂತ್ರವಾಗಿ ನಡೆದಿದೆ. ಆದ್ರೆ ವಾಪಸ್ ಹೋಗುವ ವೇಳೆ ಗೊಂದಲ ಶುರುವಾಗಿದೆ. ಗಂಡನ ಜೊತೆ ಮನೆಗೆ ಹೋಗುವುದಿಲ್ಲ ಎಂದು ವಧು ಹಠ ಹಿಡಿದಿದ್ದಾಳೆ. ಇದಕ್ಕೆ ಕಾರಣವಾಗಿದ್ದು ಆತನ ದಡ್ಡತನ.

ವಧುವಿನ ಸ್ನೇಹಿತೆಯರು ವರನಿಗೆ 5 ಸಾವಿರ ರೂಪಾಯಿ ಎಣಿಸಲು ಹೇಳಿದ್ದಾರೆ. ಆದ್ರೆ ಆತ ಹಣ ಎಣಿಸುವಲ್ಲಿ ವಿಫಲನಾಗಿದ್ದಾನೆ. ಹಾಗಾಗಿ ಆತನ ಜೊತೆ ಹೋಗಲು ವಧು ನಿರಾಕರಿಸಿದ್ದಾಳೆ. ವಿಷಯ ತಿಳಿದ ವಧು ಕಡೆಯವರು ಕೂಡ ಮಗಳನ್ನು ಆತನ ಜೊತೆ ಕಳುಹಿಸಿಕೊಡಲು ಒಪ್ಪಲಿಲ್ಲ. ಅಲ್ಲದೆ ಮಗ ದಡ್ಡ ಎಂಬ ವಿಚಾರವನ್ನು ಮುಚ್ಚಿಟ್ಟಿದ್ದಾರೆಂದು ಆರೋಪಿಸಿದ್ದಾರೆ.

ಇಬ್ಬರ ನಡುವೆ ಸಂಧಾನ ನಡೆಸಲು ಪಂಚಾಯ್ತಿ ಕರೆಸಲಾಗಿದೆ. ಆದ್ರೆ ಅಲ್ಲೂ ಸಮಸ್ಯೆ ಬಗೆಹರಿಯದಿದ್ದಾಗ ಪೊಲೀಸರಿಗೆ ಸುದ್ದಿ ಮುಟ್ಟಿಸಲಾಗಿದೆ. ಸದ್ಯ ಪೊಲೀಸರು ಮಾತುಕತೆ ನಡೆಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...