alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲ್ವೆ ಟಿಕೆಟ್ ಬುಕ್ಕಿಂಗ್ ಮೇಲೆ ಶೇ.100 ರಿಯಾಯಿತಿ

ಹಿರಿಯ ನಾಗರಿಕರಿಗಾಗಿ ಜಾರಿಗೆ ತಂದ Give it up ಅಂದ್ರೆ ಸಬ್ಸಿಡಿ ಬಿಡುವ ಯೋಜನೆ ಯಶಸ್ವಿಯಾದ ಮೇಲೆ ರೈಲ್ವೆ ಇಲಾಖೆ ಇದನ್ನು ಬೇರೆ ವರ್ಗದವರಿಗೂ ವಿಸ್ತರಿಸುವ ಚಿಂತನೆ ನಡೆಸಿದೆ.ಜನರು ಬಯಸಿದ್ರೆ ತಮಗೆ ನೀಡುವ ಸಬ್ಸಿಡಿಯ ಒಂದು ಭಾಗವನ್ನು ಬಿಡಬಹುದಾಗಿದೆ. ರೈಲ್ವೆ ಇಲಾಖೆ ಕೆಲವರಿಗೆ ಟಿಕೆಟ್ ಬುಕ್ಕಿಂಗ್ ವೇಳೆ ರಿಯಾಯಿತಿ ನೀಡುತ್ತದೆ. ಕೆಲವರಿಗೆ ಶೇಕಡಾ 100ರಷ್ಟು ರಿಯಾಯಿತಿ ನೀಡಿದ್ರೆ ಮತ್ತೆ ಕೆಲವರಿಗೆ ಶೇಕಡಾ 25ರಷ್ಟು ರಿಯಾಯಿತಿ ಸಿಗುತ್ತಿದೆ.

ಕ್ಯಾನ್ಸರ್ ರೋಗಿ ಹಾಗೂ ಆತನ ಸಹಾಯಕ ಚಿಕಿತ್ಸೆಗಾಗಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ ಫಸ್ಟ್ ಕ್ಲಾಸ್ ಹಾಗೂ ಸೆಕೆಂಡ್ ಕ್ಲಾಸ್ ಟಿಕೆಟ್ ಮೇಲೆ ಶೇಕಡಾ 75ರಷ್ಟು ರಿಯಾಯಿತಿ ಸಿಗುತ್ತದೆ. ಥರ್ಡ್ ಎಸಿ ಹಾಗೂ ಸ್ಲೀಪರ್ ಕೋಚ್ ನಲ್ಲಿ ಶೇಕಡಾ 100ರಷ್ಟು ರಿಯಾಯಿತಿ ಸಿಗುತ್ತದೆ.ಫಸ್ಟ್ ಎಸಿ ಹಾಗೂ ಸೆಕೆಂಡ್ ಎಸಿ ಟಿಕೆಟ್ ಬುಕ್ ಮಾಡಿದ್ರೆ 50ರಷ್ಟು ರಿಯಾಯಿತಿ ಸಿಗುತ್ತದೆ.

ಹೃದಯ,ಕಿಡ್ನಿ, Thalassemia ರೋಗಿಗಳು ಚಿಕಿತ್ಸೆ ಅಥವಾ ಪರೀಕ್ಷೆಗಾಗಿ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿದ್ದರೆ ಟಿಕೆಟ್ ಮೇಲೆ ರಿಯಾಯಿತಿ ಸಿಗಲಿದೆ.ಫಸ್ಟ್ ಎಸಿ ಹಾಗೂ ಸೆಕೆಂಡ್ ಎಸಿ ಟಿಕೆಟ್ ಗೆ ಶೇಕಡಾ 50ರಷ್ಟು ಹಾಗೂ ಫಸ್ಟ್ ಕ್ಲಾಸ್ ಹಾಗೂ ಸೆಕೆಂಡ್ ಕ್ಲಾಸ್ ಗೆ ಶೇಕಡಾ 75ರಷ್ಟು ರಿಯಾಯಿತಿ ಸಿಗುತ್ತಿದೆ.

ಯುದ್ಧದಲ್ಲಿ ಮಡಿದ ಯೋಧರ ಪತ್ನಿಯರಿಗೂ ರೈಲ್ವೆ ಟಿಕೆಟ್ ನಲ್ಲಿ ರಿಯಾಯಿತಿ ಸಿಗುತ್ತದೆ.ವಿಕಲಾಂಗರಿಗೆ ಕೂಡ ರೈಲ್ವೆ ಇಲಾಖೆ ಟಿಕೆಟ್ ನಲ್ಲಿ ರಿಯಾಯಿತಿ ನೀಡ್ತಿದೆ.ಹಿರಿಯ ನಾಗರಿಕರಿಗೆ ಶೇಕಡಾ 40ರಿಂದ ಶೇಕಡಾ 50ರಷ್ಟು ರಿಯಾಯಿತಿ ಸಿಗ್ತಿದೆ.

ವಿದ್ಯಾರ್ಥಿಗಳಿಗೂ ರೈಲ್ವೆ ಇಲಾಖೆ ನೆರವಿನ ಹಸ್ತ ಚಾಚಿದೆ. ಟಿಕೆಟ್ ಬುಕ್ಕಿಂಗ್ ವೇಳೆ ರಿಯಾಯಿತಿ ನೀಡ್ತಿದೆ. ಹಿರಿಯ ನಾಗರಿಕರನ್ನು ಬಿಟ್ಟು ಮತ್ತ್ಯಾರಿಗೂ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಮಾಡಿದ್ರೆ ರಿಯಾಯಿತಿ ಸಿಗುವುದಿಲ್ಲ. ಟಿಕೆಟ್ ಕೌಂಟರ್ ಗೆ ಹೋಗಿ ಪ್ರತ್ಯೇಕ ಅರ್ಜಿ ಭರ್ತಿ ಮಾಡಬೇಕಾಗುತ್ತದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...