alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದೇವಾಲಯಕ್ಕೆ ಬರಲು ಭಯಪಡ್ತಾರೆ ಭಕ್ತರು..!

temple

ಜೀವನದಲ್ಲಿ ಒಮ್ಮೆಯಾದ್ರೂ ಪ್ರತಿಯೊಬ್ಬರೂ ಭೇಟಿ ಕೊಡಲೇಬೇಕಾದ ದೇವಾಲಯವೊಂದಿದೆ, ಬದುಕಿದ್ದಾಗ ಅಲ್ಲದೇ ಇದ್ರೂ ಸತ್ತ ಮೇಲಾದ್ರೂ ಅಲ್ಲಿಗೆ ಹೋಗಲೇಬೇಕು. ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯ ಭರ್ಮೋರ್ ನಲ್ಲಿರೋ ದೇವಾಲಯ ಅದು.

ಈ ದೇವಸ್ಥಾನ ಪುಟ್ಟ ಮನೆಯಂತಿದೆ, ಇದರ ಒಳ ಹೋಗಲು ಭಯಪಡೋ ಭಕ್ತರು ಹೊರಗಿನಿಂದ್ಲೇ ಕೈಮುಗಿದು ಹೊರಟುಬಿಡ್ತಾರೆ. ಕಾರಣ ಏನ್ ಗೊತ್ತಾ? ಇವನು ಸಾವಿನ ದೇವರು. ಇಲ್ಲಿರುವವನು ಸಾಕ್ಷಾತ್ ಯಮರಾಜ. ಜಗತ್ತಿನಲ್ಲಿರುವ ಏಕೈಕ ಯಮ ದೇವಾಲಯ ಇದು.

ಈ ದೇವಸ್ಥಾನದ ಒಂದು ಕೋಣೆ ಚಿತ್ರಗುಪ್ತನಿಗೆ ಮೀಸಲಾಗಿದೆ. ಚಿತ್ರಗುಪ್ತ ಯಮರಾಜನ ಬಂಟ, ಎಲ್ಲರ ಧರ್ಮ- ಕರ್ಮದ ಲೆಕ್ಕ ಇಡುವವನು ಅವನೇ. ಮರಣದ ನಂತರ ಪ್ರತಿಯೊಬ್ಬನ ಆತ್ಮವನ್ನೂ ಇಲ್ಲಿಗೆ ತರಲಾಗುತ್ತದೆ ಎಂಬ ನಂಬಿಕೆ ಇದೆ.

ಈ ದೇವಾಲಯದಲ್ಲಿ ನಮ್ಮ ಕಣ್ಣಿಗೆ ಗೋಚರಿಸಲದ ಚಿನ್ನ, ಬೆಳ್ಳಿ, ಕಂಚು ಮತ್ತು ಕಬ್ಬಿಣದ ನಾಲ್ಕು ಬಾಗಿಲುಗಳಿವೆಯಂತೆ. ಯಾವ ಆತ್ಮ ಯಾವ ಬಾಗಿಲಿನಿಂದ ಸಾಗಬೇಕು ಎಂಬುದನ್ನು ಯಮರಾಜ ನಿರ್ಧರಿಸುತ್ತಾನಂತೆ. ಗರುಡ ಪುರಾಣದಲ್ಲೂ ಸಾವಿನ ನಂತರ ಆತ್ಮದ ನಾಲ್ಕು ಬಾಗಿಲುಗಳ ಪ್ರವೇಶದ ಬಗ್ಗೆ ಉಲ್ಲೇಖವಿದೆ.

ಅದನ್ನು ನಿರ್ಧರಿಸುವ ಮುನ್ನ ಆತ್ಮವನ್ನು ಚಿತ್ರಗುಪ್ತನೆದುರು ಹಾಜರುಪಡಿಸಲಾಗುತ್ತದೆ. ಆತ ಅವರ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ತುಲನೆ ಮಾಡಿ ಯಾವ ಬಾಗಿಲಿನ ಮೂಲಕ ಆತ್ಮ ಪ್ರವೇಶಿಸಬೇಕೆಂದು ನಿರ್ಧರಿಸುತ್ತಾನೆ. ಈ ಕೆಲಸಕ್ಕಾಗಿ ಚಿತ್ರಗುಪ್ತ, ಶ್ರವಣನ ಸಹಾಯ ಪಡೆಯುತ್ತಾನಂತೆ. ಶ್ರವಣ, ಬ್ರಹ್ಮನ ಪುತ್ರ. ಸ್ವರ್ಗ, ನರಕ ಮತ್ತು ಭೂಮಿಯ ಬಗ್ಗೆ ಅವನಿಗೆ ಎಲ್ಲವೂ ಗೊತ್ತು. ಅವನ ಪತ್ನಿ ಶ್ರಾವಣಿ ಮಹಿಳೆಯರ ಸ್ವಭಾವವನ್ನೆಲ್ಲ ಅರಿತಿದ್ದಾಳಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...